ತೆಕ್ಕಟ್ಟೆ : ತೆಕ್ಕಟ್ಟೆಯ ಸೇವಾ ಸಂಗಮ ವಿದ್ಯಾ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂಭಾಶಿಯ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಪ್ರತಿಕ್ ಟಿ ಆರ್ ರವರು ಮಾತನಾಡಿ ಎಳವೆಯಲ್ಲಿ ಆತ್ಮಭಿಮಾನದ ಕಿಚ್ಚು ಬೆಳೆದಾಗ, ಅದು ನಾನು ನನ್ನ ದೇಶ ಎಂಬ ಪ್ರೀತಿಯಾಗಿ ರೂಪಾಂತರಗೊಂಡು ಆತ್ಮಭಿಮಾನದೊಂದಿಗೆ ದೇಶಾಭಿಮಾನ ಮೂಡುತ್ತದೆ.
ದೇಶದಲ್ಲಿನ ವಿದ್ಯಾವಂತರು ಉದ್ಯೋಗಕ್ಕಾಗಿ ಅನ್ಯ ದೇಶಕ್ಕೆ ವಲಸೆ ಹೋಗದೆ, ಇಲ್ಲಿಯೇ ಉದ್ಯೋಗವನ್ನು ನಡೆಸಿ, ನಮ್ಮ ದೇಶದ ರಕ್ಷಣೆಯ ಕಾರ್ಯದಲ್ಲಿ ಆರ್ಥಿಕತೆಯ ಅಭಿವೃದ್ಧಿಗೆ ಸಹಕರಿಸಿದಾಗ ಮಾತ್ರ ದೇಶದ ಬಲ ವೃದ್ಧಿಯಾಗುವುದು ಎಂದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಸುರೇಶ್ ಬೆಟ್ಟಿನ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿಯ ಸಂಚಾಲಕರಾದ ಕಮಲಾಕ್ಷ ಪೈ, ಮುಖ್ಯೋಪಾಧ್ಯಾಯರಾದ ಹರ್ಷ ಕೋಟೇಶ್ವರ ಆಡಳಿತ ಮಂಡಳಿಯ ಸದಸ್ಯರು , ಮಕ್ಕಳ ಪಾಲಕರು, ಹಿರಿಯ ವಿದ್ಯಾರ್ಥಿಗಳು, ಮಾತಾಜಿ ವೃಂದದವರು, ಸಿಬ್ಬಂದಿಗಳು ಉಪಸ್ಥಿತರಿದ್ದರು.7ನೇ ತರಗತಿಯ ತನ್ಮಯ್ ಸ್ವಾಗತಿಸಿ 6ನೇ ತರಗತಿಯ ಪ್ರಣವ ವಂದಿಸಿ 7ನೇ ತರಗತಿಯ ಅನ್ವಿತ ಕಾರ್ಯಕ್ರಮ ನಿರೂಪಿಸಿದರು.

