ಕುಂದಾಪುರ : ವಿಶಾಲವಾದ ಎತ್ತರದ ಆವರಣದಲ್ಲಿ ಗಂಗಾವಳಿ ನದಿಗೆ ಮುಖ ಮಾಡಿಕೊಂಡಿರುವ ಚಿಕ್ಕಮ್ಮ ದೇವಿ ದೇವಸ್ಥಾನದ ಸಾಂಪ್ರದಾಯಿಕತೆಯ ಮೆರುಗನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ನವೀಕರಣದ ಸಂದರ್ಭದಲ್ಲಿ ಆಧುನಿಕತೆ ಮತ್ತು ಸಾಂಪ್ರದಾಯಿಕತೆಯನ್ನು ಮೈಗೂಡಿಸಿಕೊಂಡು ಹೊಚ್ಚ ಹೊಸದಾಗಿ ಅಲಂಕರಿಸಲ್ಪಡುತ್ತಿರುವ ಚಿಕ್ಕಮ್ಮ ದೇವಸ್ಥಾನವು ಶತಮಾನಗಳಿಂದಲೂ ಎಲ್ಲಾ ವರ್ಗದ ಸಮಾಜ ಬಾಂಧವರ ನಂಬಿಕೆ, ನಡವಳಿಕೆ, ಶ್ರದ್ಧೆಯ ಶಕ್ತಿ ಕೇಂದ್ರವಾಗಿ ಖ್ಯಾತಿಯನ್ನು ಪಡೆದುಕೊಂಡು ಬಂದಿದೆ.
ಚಿಕ್ಕಮ್ಮ ದೇವಿ ದೇವಸ್ಥಾನದಲ್ಲಿ ಕಂಡು ಬರುವುದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿಶಿಷ್ಟವಾಗಿ ಕಂಡು ಬರುವ ಕಾಷ್ಠ ವಿಗ್ರಹಗಳು, ಚಿಕ್ಕು ಅಮ್ಮ ಎಂದೇ ಜನಜನಿತವಾಗಿ ಕ್ರಮೇಣ ಜನರ ಆಡುಭಾಷೆಯಲ್ಲಿ ಚಿಕ್ಕಮ್ಮ ದೇವಿ ಎಂದು ಪರಿವರ್ತಿತವಾಗಿರುವ ಚಿಕ್ಕಮ್ಮ ದೇವಿ ದೇವಸ್ಥಾನವು ಶಕ್ತಿ ಸಾನಿಧ್ಯವನ್ನು ಹೊಂದಿದೆ.
ದಿನಾಂಕ 27 ರಂದುಶನಿವಾರ ಚಂಡಿಕಾ ಹೋಮ, ಗೆಂಡಮಹೋತ್ಸವ ಹಾಗೂ ಅನ್ನಸಂತರ್ಪಣೆ ಮತ್ತು 1 ಕೆ ಜಿ ರಜತಮಾಲೆ ಸಮರ್ಪಣೆ ನಡೆಯಿತು 28ನೇ ತಾರೀಕು ಬೆಳಿಗ್ಗೆ 5 ರಿಂದ ಡಕ್ಕೆ ಬಲಿ, 12.30ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ