ಕೋಟ : ಸಾಸ್ತಾನದ ಕಾರ್ತಿಕ್ ಎಸ್ಟೇಟ್ ಇಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಇದರ ಎರಡನೆ ದಿನದ ಕಾರ್ಯಕ್ರಮದ ಅಂಗವಾಗಿ ಪೂರ್ವಾಹ್ನ ದೇವತಾ ಪ್ರಾರ್ಥನೆ ,ನವಗ್ರಹ ಹೋಮ ಇತ್ಯಾಧಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.
ಧಾರ್ಮಿಕ ವಿಧಿಗಳನ್ನು ಡಾ.ವಿದ್ವಾನ್ ವಿಜಯ್ ಮಂಜರ್ ಮಾರ್ಗದರ್ಶನದಲ್ಲಿ ವೇ.ಮೂ ಪ್ರಸನ್ನ ತುಂಗ ಸಾರಥ್ಯದಲ್ಲಿ ಜರಗಿತು.
ಕಲ್ಯಾಣೋತ್ಸವ ಧಾರ್ಮಿಕ ಕೈಂಕರ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ದಂಪತಿಗಳು ಭಾಗಿಯಾದರು.
ಅಪರಾಹ್ನ 12.00 ಕ್ಕೆ ವಿವಿಧ ಹೋಮಗಳ ಪೂರ್ಣಾಹುತಿ ಪ್ರಸಾದ ವಿತರಣೆಗಳು ನಡೆದುವು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರವೀಣ್ ಕುಂದರ್ ನೇತೃತ್ವದಲ್ಲಿ ಕುಣಿತ,ಕೋಲಾಟ ಭಜನೆ, ಸಂಜೆ ಜಗದೀಶ್ ಪುತ್ತೂರು ಇವರಿಂದ ಭಕ್ತಿ ರಸಮಂಜರಿ,ರಾತ್ರಿ 7.00ರಿಂದ ಸಮಿತಿಯ ಮಾರ್ಗದರ್ಶಕ ಡಾ.ವಿದ್ವಾನ್ ವಿಜಯ ಮಂಜರ್ ಇವವರಿಂದ ಧಾರ್ಮಿಕ ಸಂದೇಶ ,ಮೈಸೂರು ರಾಮಚಂದ್ರ ಆಚಾರ್ಯ ಇವರಿಂದ ಭಜನಾಮೃತ ಕಾರ್ಯಕ್ರಮ ಜರಗಿತು.
ಈ ವೇಳೆ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ ಚಂದ್ರಶೇಖರ್, ಗೌರವಾಧ್ಯಕ್ಷ ಆನಂದ್ ಸಿ ಕುಂದರ್,ಕಾರ್ಯದರ್ಶಿ ರವೀಂದ್ರ ತಿಂಗಳಾಯ,ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ,ಪ್ರಶಾಂತ್ ಶೆಟ್ಟಿ ಸಾಸ್ತಾನ,ಸಮಿತಿಯ ಪ್ರಮುಖರಾದ ಗಣೇಶ್ ಜಿ ಚೆಲ್ಲೆಮಕ್ಕಿ, ಶ್ಯಾಮಸುಂದರ್ ನಾಯರಿ,ರತ್ನಾ ಜೆ ರಾಜ್,ಚಂದ್ರಮೋಹನ್ ಪೂಜಾರಿ,ಉಲ್ಲಾಸ್ ಶೆಟ್ಟಿ,ರಾಘವೇಂದ್ರ ,ಗಣೇಶ್ ಪೂಜಾರಿ,ಲೀಲಾವತಿ ಗಂಗಾಧರ್,ಸುಲತಾ ಹೆಗ್ಡೆ,ನಾಗರಾಜ್ ಗಾಣಿಗ ಸಾಲಿಗ್ರಾಮ, ಶೇಖರ್ ಪೂಜಾರಿ,ಹರೀಶ್ ನಾಯಕ್,ವಿಠ್ಠಲ್ ಪೈ ಸಾಲಿಗ್ರಾಮ ,ಸುರೇಶ್ ಪೂಜಾರಿ ಪಾಂಡೇಶ್ವರ ಮತ್ತಿತರರು ಉಪಸ್ಥಿತರಿದ್ದರು.
ಇಂದು ವೈಭವದ ಶ್ರೀನಿವಾಸ ಕಲ್ಯಾಣೋತ್ಸವ
ಇಂದು ವೈಭವದ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಸಾಲಿಗ್ರಾಮ ಶ್ರೀ ಗುರುದೇನರಸಿಂಹ ದೇವಸ್ಥಾನದಿಂದ ಕುಣಿತ ಭಜನೆ, ಸ್ತಬ್ದ ಚಿತ್ರ, ಚಂಡೆ ಹಾಗೂ ಸಕಲ ಮಂಗಳವಾದ್ಯಗಳೊಂದಿಗೆ ಪದ್ಮಾವತಿ ಸಹಿತ ಶ್ರೀ ಶ್ರೀನಿವಾಸ ದೇವರ ದಿವ್ಯ ಶೋಭಾಯಾತ್ರೆ ನಡೆಯಲಿದೆ. ಸಂಜೆ 5.00ರಿಂದ ಶ್ರೀ ದೇವರ ವಿವಾಹ ಮಂಟಪ ಪ್ರವೇಶ, ಸೀಮಾಂತ ಪೂಜೆ, ವಿವಾಹ ಮಂಟಪಕ್ಕೆ ಶ್ರೀ ಪದ್ಮಾವತಿ ದೇವಿಯ ಆಗಮನ, ಸ್ವರ್ಣಮಣಿ ಬಂಧನ, ಮಹೂರ್ತ ನಿರೀಕ್ಷಣೆ, ಮಾಲಾಧಾರಣೆ, ಸಂಜೆ 6.30ಕ್ಕೆ ಓದಗುವ ಗೋಧೂಳಿ ಲಗ್ನ ಸುಮೂರ್ತದಲ್ಲಿ ಶ್ರೀ ಶ್ರೀನಿವಾಸ ದೇವರಿಗೆ ಶ್ರೀ ಪದ್ಮಾವತಿ ದೇವಿಯು ಕನ್ಯಾದಾನ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ” ಕಂಕಣ, ಮಂಗಳಸೂತ್ರ ಸಮರ್ಪಣೆ, ವಿವಾಹ ಹೋಮ, ಮಂಗಳಾಚಾರಣೆ, ಮಹಾಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆ, ತೀರ್ಥಪ್ರಸಾದ ವಿನಿಯೋಗ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ

