ಬೆಳ್ತಂಗಡಿ : ವಸಂತ ಬಂಗೇರ ಅವರದ್ದು ನಿಷ್ಟುರ ನೇರ ನಡೆ ನುಡಿಯ ವ್ಯಕ್ತಿತ್ವ ಸತ್ಯವನ್ನು ಹೇಳಲು ಎಂದಿಗೂ ಹಿಂಜರಿದವರಲ್ಲ, ಯಾವುದೇ ಸನ್ನಿವೇಶ ಸಂದರ್ಭಗಳಿರಲಿ ಸತ್ಯವನ್ನು ನೇರವಾಗಿ ಹೇಳುವುದು ಅವರ ವಿಶೇಷ ಗುಣವಾಗಿತ್ತು ರಾಜ್ಯ ಕಂಡ ಅಪರೂಪದ ರಾಜಕಾರಣಿ ಬಂಗೇರ ಅವರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳ್ತಂಗಡಿಯಲ್ಲಿ ಮಂಗಳವಾರ ಮಾಜಿ ಮುಖ್ಯ ಸಚೇತಕ ವಸಂತ ಬಂಗೇರ ಅವರ ಉತ್ತರ ಕ್ರಿಯೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು
ಬಂಗೇರರು ಬಡವರ ಪರವಾಗಿ ಕೆಲಸ ಮಾಡಿದರೆ ಹೊರತು ತನಗಾಗಿ ಏನೂ ಮಾಡಿದವರಲ್ಲ ಅವರು ಐದು ಬಾರಿ ಶಾಸಕರಾದರೂ ಎಂದೂ ಮಂತ್ರಿ ಆಗಲು ಪ್ರಯತ್ನಿಸಿದವರಲ್ಲ. ಮೊದಲ ಬಾರಿಗೆ 1983 ರಲ್ಲಿ ನಾವು ಒಟ್ಟಿಗೆ ಶಾಸಕರಾದವರು ಅಂದಿನಿಂದ ಕೊನೆಯವರೆಗೆ ಆತ್ಮೀಯ ಸ್ನೇಹಿತರಾಗಿದ್ದರು ಎಂದು ಸಿಎಂ ಸ್ಮರಿಸಿದರು.