247
ಕುಂದಾಪುರ : ಇಂದು ಕುಂದಾಪುರ ನಗರದ ವಡೇರಹೋಬಳಿಯ ಮೂರುಕೈ ಸಮೀಪದ ಬೆನಕ ಟವರ್ಸ್ ನಲ್ಲಿ ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಶಿರಸಿ ಇದರ 17 ನೇ ಶಾಖೆಯು ಉಧ್ಘಾಟನೆಗೊಳ್ಳಲಿದೆ ಕುಂದಾಪುರ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ನೂತನ ಶಾಖೆಯನ್ನು ಉಧ್ಘಾಟಿಸಲಿದ್ದಾರೆ
ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಇದರ ಅಧ್ಯಕ್ಷರಾದ ಜಯದೇವ್ ಯು ನಿಲೇಕಣಿಯವರು ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಕುಂದಾಪುರದ ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ ಎಸ್ ಆರ್ ಪುರಸಭೆ ಸದಸ್ಯರಾದ ಶೇಖರ್ ಪೂಜಾರಿ ರೋಹಿಣಿ ಉದಯ್ ಕುಮಾರ್ ಹಾಗೂ ಉದ್ಯಮಿ ಪ್ರಭಾಕರ ಪ್ರಭು ರವರು ಭಾಗವಹಿಸಲಿದ್ದಾರೆ ಕುಂದಾಪುರದ ಭಂಡಾರಕಾರ್ಸ್ ಕಾಲೇಜಿನ ಕೋಯಾ ಕುಟ್ಟಿ ಸಭಾಂಗಣದಲ್ಲಿ ಮಧ್ಯಾಹ್ನ 12.00 ಗಂಟೆಗೆ ಸಭಾ ಕಾರ್ಯಕ್ರಮದ ನಡೆಯಲಿದೆ ಎಂದು ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಇದರ ಶಾಖಾಧ್ಯಕ್ಷರು ತಿಳಿಸಿದ್ದಾರೆ

