Home » ಸ್ಪಂದನಾ ನಿಧನ : ಗಣ್ಯರ ಸಂತಾಪ
 

ಸ್ಪಂದನಾ ನಿಧನ : ಗಣ್ಯರ ಸಂತಾಪ

by Kundapur Xpress
Spread the love

ಬೆಂಗಳೂರು : ತೀವ್ರ ಹೃದಯಾಘಾತದಿಂದ ನಟ ವಿಜಯ್ ರಾಘವೇಂದ್ರ ರವರ ಪತ್ನಿ ಸ್ಪಂದನಾ ನಿಧನಕ್ಕೆ ರಾಜ್ಯದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ  ಡಿ ಕೆ ಶಿವಕುಮಾರ್ ಮಾಜಿ ಮುಖ್ಯಮಂತ್ರಿಯಾದ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ

ಈಗಾಗಲೇ ಸ್ಪಂದನಾರವರ ಮರಣೋತ್ತರ ಪರೀಕ್ಷೆ ಮುಗಿದಿದ್ದು ಕಾನೂನಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಪ್ರಾರ್ಥಿವ ಶರೀರವು ಬೆಂಗಳೂರಿಗೆ ಆಗಮಿಸಲಿದ್ದು ಬುಧವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ

2007 ರ ಅಗಸ್ಟ್ 26 ರಂದು ವಿಜಯ ರಾಘವೇಂದ್ರ ಮತ್ತು ಸ್ಪಂದನಾ ರವರ ಮದುವೆಯಾಗಿದ್ದು ದಂಪತಿಗೆ 11 ವರ್ಷದ ಶೌರ್ಯ ಎಂಬ ಪುತ್ರನಿದ್ದಾನೆ ರವಿಚಂದ್ರನ್ ಅಭಿನಯದ ಅಪೂರ್ವ ಚಿತ್ರ ಸೇರಿದಂತೆ ಐದು ಚಿತ್ರಗಳಲ್ಲಿ ಚಿಕ್ಕಚಿಕ್ಕ ಪಾತ್ರಗಳಲ್ಲಿ ಸ್ಪಂದನಾರವರು ಅಭಿನಯಿಸಿದ್ದರು

   

Related Articles

error: Content is protected !!