Home » ಸೂಲಿಬೆಲೆ ಕಾರ್ಯಕ್ರಮ : ಆಯೋಜಕರಿಗೆ ಪೊಲೀಸ್‌ ನೋಟಿಸ್
 

ಸೂಲಿಬೆಲೆ ಕಾರ್ಯಕ್ರಮ : ಆಯೋಜಕರಿಗೆ ಪೊಲೀಸ್‌ ನೋಟಿಸ್

by Kundapur Xpress
Spread the love

ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯ ಮೊಗವೀರ ಸಭಾಭವನದಲ್ಲಿಿಂದು ಜೂನ್ 20 ರಿಂದ 22ರ ವರೆಗೆ ಹಮ್ಮಿಕೊಳ್ಳಲಾದ ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ ಎಂಬ ವಿಷಯದ ಕುರಿತು ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ಕಾರ್ಯಕ್ರಮದ ಆಯೋಜಕರಿಗೆ ಕುಂದಾಪುರ ಪೊಲೀಸ್ ಠಾಣೆಯಿಂದ ನೋಟಿಸ್‌ ನೀಡಿ, ಷರತ್ತುಗಳನ್ನು ವಿಧಿಸಲಾಗಿದೆ.

ಯುವ ಬ್ರಿಗೇಡ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅದರಂತೆ ಪ್ರತಿದಿನ ಸಂಜೆ 6.00 ಗಂಟೆಗೆ ಚಕ್ರವರ್ತಿ ಸೂಲಿಬೆಲೆ ಅವರು ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಉಪನ್ಯಾಸ ನೀಡುವಾಗ ಅನ್ಯ ಧರ್ಮಗಳಿಗೆ ನೋವು ಅಥವಾ ದಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಉಪನ್ಯಾಸದ ವಿಷಯಕ್ಕೆ ಸಂಬಂಧಪಟ್ಟಂತೆ ಮಾತ್ರ ಉಪನ್ಯಾಸ ನೀಡಬೇಕು ಎಂಬ ವಿವಿಧ ಶರತ್ತುಗಳನ್ನು ವಿಧಿಸಲಾಗಿದೆ.

 

Related Articles

error: Content is protected !!