ಉಡುಪಿ : ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾರ 3500 ಕೋಟಿ ರು. ಅನುದಾನ ನೀಡಿದೆ. ನಾನು ಪಕ್ಷೇತರ ಆಗಿದ್ದರೂ ಇಷ್ಟು ಅನುದಾನ ನೀಡಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಮೋದಿ ಅವರ ಬೆಂಬಲ ಸದಾ ಇದೆ ಎಂದು ಇದೇ ಉದಾಹರಣೆ. ಅದಕ್ಕೆ ಈ ಬಾರಿ ನನಗೆ ಬಿಜೆಪಿ ಟಿಕೇಟ್ ನೀಡದಿದ್ದರೂ ನಾನು ಬಿಜೆಪಿ ಸೇರಿದ್ದೇನೆ. ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಕೆಲವರು ಮತ ವಿಭಜನೆ ಆಗುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಎದುರಾಳಿ ಅಭ್ಯರ್ಥಿ ಡಿ.ಕೆ.ಸುರೇಶ್ ಮೇಲೆ ವಾಗ್ದಾಳಿ ನಡೆಸಿದ ಅವರು, ಅಭಿವೃದ್ಧಿ ಮಾಡದಿದ್ದಾಗ, ಕೇವಲ ಸುಳ್ಳು ಸ್ವಾರ್ಥ ಹೆಚ್ಚಾದಾಗ ಮತ ವಿಭಜನೆ ಆಗುತ್ತದೆ. ದೇಶದ ಹಿತ, ನಿಸ್ವಾರ್ಥ ಸೇವೆ ಗೆಲ್ಲುತ್ತದೆ ಎಂದರು. ಬಿಜೆಪಿ ಹೇಳಿದಲ್ಲಿ ಹೋಗಿ ಪ್ರಚಾರ ಮಾಡುತ್ತಿದ್ದೇನೆ,ಮಂಡ್ಯದಲ್ಲಿಕುಮಾರಸ್ವಾಮಿ ಪರ ಪ್ರಚಾರ ಇನ್ನೂ ಹೇಳಿಲ್ಲ, ಹೇಳಿದರೇ ಹೋಗುತ್ತೇನೆ. ಈ ವಿಚಾರದಲ್ಲಿ ಅನಗತ್ಯ ಚರ್ಚೆ ಬೇಡ, ನಾನು ಬಿಜೆಪಿ ಎನ್ ಡಿ ಎ ಪರ ಪ್ರಚಾರ ಮಾಡುತ್ತೇನೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು