ಉಡುಪಿ : ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿಗೆ ಕೆಲ ದಿನಗಳ ಹಿಂದೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ತಂಡ ಭೇಟಿ ನೀಡಿ ಕಾಲೇಜಿಗೆ A+ ಗ್ರೇಡ್ ನೀಡಿದ್ದು, ಇದು ಉಡುಪಿ ಜಿಲ್ಲೆಯಲ್ಲಿ A+ ಗ್ರೇಡ್ ಪಡೆದ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಶ್ರಮಿಸಿದವರಿಗೆ ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ವಿಧ್ಯಾವರ್ಧಕ ಸಂಘ ರಿ. ಶಿರ್ವ ಅಧ್ಯಕ್ಷರಾದ ವಿ. ಸುಬ್ರಯ್ಯ ಹೆಗ್ಡೆ, ಆಡಳಿತಾಧಿಕಾರಿಗಳಾದ ಫ್ರೊಫೆಸರ್ ವೈ. ಭಾಸ್ಕರ್ ಶೆಟ್ಟಿ, ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ನಯನ, ನಿವೃತ್ತ ಪ್ರಾಂಶುಪಾಲರು ನ್ಯಾಕ್ ಸಂಯೋಜಕರಾದ ಕೆ.ಜಿ ಮಂಜುನಾಥ್, ಶಿರ್ವ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಕಳತ್ತೂರು, ಹೆತ್ತವರು – ರಕ್ಷರು ಸಂಘದ ಅಧ್ಯಕ್ಷರಾದ ಲಲಿತಾ ಹೆಬ್ಬಾರ್, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವೈಶಾಖ್ ಹೆಬ್ಬಾರ್ ಉಪಸ್ಥಿತರಿದ್ದರು