ಮಂಗಳೂರು : ಮಂಗಳೂರಿನ ಬಲ್ಮಠದ ಡಾನ್ ಬೊಸ್ಕೊ ಹಾಲ್‌ನಲ್ಲಿ ತ್ರಿಶಾ ಕಾಲೇಜ್‌ನ ಬಿಕಾಂ ಮತ್ತು ಬಿಸಿಎ ವಿದ್ಯಾರ್ಥಿಗಳಿಗೆ ಪ್ರಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ದೀಪ ಬೆಳಗಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು
ಮುಖ್ಯ ಅತಿಥಿಯಾಗಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಪದವಿಯು ಜೀವನದ ಅತಿ ಮುಖ್ಯವಾದ ಘಟ್ಟ. ಅದು ವ್ಯಕ್ತಿತ್ವ ವಿಕಾಸ, ಶಿಸ್ತಿನ ಕಲಿಕೆ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವಿನ ಹಾದಿಯಾಗಿದೆ. ಉತ್ತಮ ರೀತಿಯಲ್ಲಿ ಪದವಿಯನ್ನು ಮುಗಿಸಿ ಮುಂದಿನ ಹಂತದ ಜೀವನವನ್ನು ರೂಪಿಸಿಕೊಳ್ಳಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ ನಾರಾಯಣ ಕಾಯರಕಟ್ಟೆ ಮಾತನಾಡಿ, “ಸಮಯ ವ್ಯರ್ಥ ಮಾಡದೇ ಸಮಾಜದಲ್ಲಿ ಎತ್ತರಕ್ಕೆ ಬೆಳೆಯುವ ಗುರಿಯನ್ನು ಹೊಂದಿ, ನಿತ್ಯ ಹೆಚ್ಚು ಓದುವ ಕಡೆ ಗಮನ ಹರಿಸಿ” ಎಂದು ತಿಳಿಸಿದರು. ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್‌ನ ಪ್ರಾಂಶುಪಾಲರು ಮಂಜುನಾಥ್ ಕಾಮತ್ ಎಮ್ ಸ್ವಾಗತಿಸಿದರು. ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರು ಸುಪ್ರಭಾ ಎಮ್ ವಂದಿಸಿದರು. ಕಾರ್ಯಕ್ರಮದಲ್ಲಿ ತ್ರಿಶಾ ಕ್ಲಾಸಸ್‌ನ ಕೇಂದ್ರ ಮುಖ್ಯಸ್ಥೆ ಯಶಸ್ವಿನಿ ಯಶಪಾಲ್ ಹಾಗೂ ತ್ರಿಶಾ ಸಂಸ್ಥೆಯ ಭೋಧಕ-ಭೋಧಕೇತರ ಸಿಬ್ಬಂದಿಗಳು ಮತ್ತು 370 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

