ಮಂಗಳೂರು : ವಿಶ್ವಕ್ಕೆ ಭಾರತೀಯ ತತ್ವಜ್ಞಾನ ಮತ್ತು ಸನಾತನ ಧರ್ಮದ ಮಹತ್ವವನ್ನು ಪರಿಚಯಿಸಿದ ಮಹಾನ್ ಯೋಗಿ ಸ್ವಾಮಿ ವಿವೇಕಾನಂದರು. ತನ್ನ ಸಂದೇಶಗಳಿಂದ ಜನರ ಮನಸ್ಸಿನಲ್ಲಿ ಹೊಸ ಹುಮ್ಮಸ್ಸು ಉಂಟುಮಾಡಿದರು. “ಉತ್ತಿಷ್ಠಿತ ಜಾಗೃತ”! ಎಂಬ ನಿನಾದದಲ್ಲಿ ಪ್ರತಿಫಲಿಸಿದಂತೆ ಅವರು ಜೀವನದ ಪ್ರತಿ ಕ್ಷಣವನ್ನು ಸಾರ್ಥಕತೆಯಿಂದ , ಸಾಧನೆಯ ದಾರಿಗೆ ಬೆಳೆಸಲು ಪ್ರೇರೇಪಿಸಿದರು ಎಂದು ಕಾರ್ಕಳದ ಉಪನ್ಯಾಸಕ ಅಕ್ಷಯ ಗೋಖಲೆ ರವರು ಹೇಳಿದರು.
ಅವರು ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕ ವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ 40ನೇ ಉಪನ್ಯಾಸದಲ್ಲಿ “ಮಹಾ ಬೆಳಕು : ಸ್ವಾಮಿ ವಿವೇಕಾನಂದ ಜೀವನ- ಸಂದೇಶ” ಎಂಬ ವಿಷಯದ ಕುರಿತು ಮಾತನಾಡಿದರು.
ಅಧ್ಯಕ್ಷತೆಯನ್ನು ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲರಾದ ಪ್ರೊ. ಮಂಜುನಾಥ್ ಕಾಮತ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಪ್ರಭಾ ಎಂ, ತ್ರಿಶಾ ಕ್ಲಾಸಸ್ ಮಂಗಳೂರು ಕೇಂದ್ರದ ಮುಖ್ಯಸ್ಥೆ ಯಶಸ್ವಿನಿ ಯಶ್ ಪಾಲ್ , ಕಾರ್ಯಕ್ರಮ ಸಂಯೋಜಕರಾದ ನಮೃತ ಶೆಟ್ಟಿ , ರಾಮಕೃಷ್ಣ ಮಿಷನ್ ಮಂಗಳೂರಿನ ಯುವ ಸಂಯೋಜಕರಾದ ಶ್ರೀ ಸಜಿತ್ ಕೆ ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗಡೆಯವರು ಸ್ವಾಗತಿಸಿ, ವಿದ್ಯಾರ್ಥಿನಿ ಇಂಚರಾ ತಂತ್ರಿ ನಿರೂಪಿಸಿ, ಪ್ರಾಧ್ಯಾಪಕಿ ವಿದ್ಯಾಲಕ್ಷ್ಮಿ ವಂದಿಸಿದರು.