ಕಾಪು : ವಿಧಾನಸಭಾ ಕ್ಷೇತ್ರದ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 1 ಕೋಟಿ 15 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆ ಹಾಗೂ ಉದ್ಘಾಟನೆಯನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ಕಾಪು ತಾಲೂಕು ಎಲ್ಲೂರು ಅದಮಾರು ಬಳಿ ಮಲ್ಟಿ ಪರ್ಪಸ್ ಸೆಂಟರ್ ನಿರ್ಮಾಣ – 60 ಲಕ್ಷ, ಮಡಿವಾಳ ತೋಟ ಹರೀಶ್ ಶೆಟ್ಟಿ ಬಳಿ ರಸ್ತೆ ಅಭಿವೃದ್ಧಿ – 10 ಲಕ್ಷ, ಮಾಣಿಯೂರು ಕೋರ್ದಬ್ಬು ದೈವಸ್ಥಾನ ರಸ್ತೆ ಅಭಿವೃದ್ಧಿ – 10 ಲಕ್ಷ, ಎಲ್ಲೂರು ಗುತ್ತು ರಸ್ತೆ ಅಭಿವೃದ್ಧಿ – 10 ಲಕ್ಷ ಸೇರಿದಂತೆ ಒಟ್ಟು 90 ಲಕ್ಷ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಉಳ್ಳೂರು ವಿಮಲ ಪೂಜಾರ್ತಿ ಮನೆ ಬಳಿ ರಸ್ತೆ ಅಭಿವೃದ್ಧಿ – 5 ಲಕ್ಷ, ತೆಂಕರಗುತ್ತು ರಸ್ತೆ ಅಭಿವೃದ್ಧಿ – 5 ಲಕ್ಷ, ಮಾಣಿಯೂರು ಮಠ ರಸ್ತೆ ಅಭಿವೃದ್ಧಿ – 5 ಲಕ್ಷ, ಕುಂಜೂರು ಶಾಂಭವಿ ಶೆಟ್ಟಿ ಮನೆ ಬಳಿ ರಸ್ತೆ ಅಭಿವೃದ್ಧಿ – 5 ಲಕ್ಷ, ಪಾಂಡುರಂಗ ಭಜನಾ ಮಂದಿರದ ಶೌಚಾಲಯ ಮತ್ತು ಸ್ನಾನದ ಕೋಣೆ ನಿರ್ಮಾಣ – 5 ಲಕ್ಷ ಸೇರಿದಂತೆ ಒಟ್ಟು 25 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿರಾಜ್ ರಾವ್, ಉಪಾಧ್ಯಕ್ಷರಾದ ಉಷಾ, ಪಂಚಾಯತ್ ಸದಸ್ಯರುಗಳಾದ ಜಯರಾಮ ದೇವಾಡಿಗ, ಶಾಂತಿ ಆಚಾರ್ಯ, ವಸಂತಿ ಮಧ್ವರಾಜ್, ಹರೀಶ್ ಬೆಳ್ಳಿಬೆಟ್ಟು, ದಯಾನಂದ ಶೆಟ್ಟಿಗಾರ್, ಎಲ್ಲೂರು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಪ್ರಮುಖರಾದ ಹರೀಶ್ ಶೆಟ್ಟಿ, ಗಣೇಶ್ ಕುಲಾಲ್ ಎಲ್ಲೂರು, ಉದಯ ಅದಮಾರು, ಸದಾನಂದ ಪೂಜಾರಿ, ಸುಕೇಶ್ ಶೆಟ್ಟಿ ಉಳ್ಳೂರು, ರಾಜೇಂದ್ರ ಸಾಲಿಯಾನ್, ರಾಘವೇಂದ್ರ ರಾವ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

