ಬೈಂದೂರು : ಉಪ್ಪುಂದದ ಕರ್ಕಿಕಳಿ ಎಂಬಲ್ಲಿ ಮಳೆಗಾಲದ ಸಾಂಪ್ರದಾಯಿಕ ಪಟ್ಟೆ ಬಲೆ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ಓರ್ವ ಮೃತಪಟ್ಟು ಮತ್ತೋರ್ವ ನೀರು ಪಾಲಾದ ಘಟನೆ ನಡೆದಿದೆ
ಸಚಿನ್ ಎಂಬುವರ ಮಾಲಕತ್ವದ ಮರ್ಲು ಚಿಕ್ಕು ಎಂಬ ಹೆಸರಿನ ದೋಣಿ ಸಂಪೂರ್ಣವಾಗಿ ಮುಳುಗಡೆಯಾಗಿದೆ ಕಡಲು ಪಾಲಾದ ಮೀನುಗಾರನಿಗಾಗಿ ತೀವೃ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ
ದೋಣಿಯಲ್ಲಿ ಆರು ಜನರಿದ್ದು ನಾಲ್ವರು ಈಜಿ ದಡ ಸೇರಿದ್ದಾರೆ ನಾಗೇಶ್ (30 ವರ್ಷ) ಎಂಬುವವರೇ ಮೃತ ದುರ್ದೈವಿಯಾಗಿದ್ದು ಸತೀಶ್ (29 ವರ್ಷ) ಎಂಬವರು ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ
ಘಟನಾ ಸ್ಥಳಕ್ಕೆ ಬೈಂದೂರು ತಹಸೀಲ್ದಾರ್ ಶ್ರೀಕಾಂತ್ ಕೆ ಹೆಗಡೆ ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ ಬೈಂದೂರು ಅಗ್ನಿಶಾಮಕ ದಳ ಕೋಸ್ಟಲ್ ಗಾರ್ಡ್ ಮೀನುಗಾರಿಕಾ ಸಹಾಯಕ ನಿರ್ದೇಶಕರಾದ ಸುಮಲತಾ ಮುಳುಗು ತಜ್ಞರಾದ ದಿನೇಶ್ ಖಾರ್ವಿ ನಾಟಾ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ ಇತರ ಸಂಘ ಸಂಸ್ಥೆಗಳ ಸದಸ್ಯರು ಹಾಜರಿದ್ದರು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ