Home » ರೋಟರಿ ಕುಂದಾಪುರ ದಕ್ಷಿಣ : ವನಮಹೋತ್ಸವ
 

ರೋಟರಿ ಕುಂದಾಪುರ ದಕ್ಷಿಣ : ವನಮಹೋತ್ಸವ

by Kundapur Xpress
Spread the love

ಕುಂದಾಪುರ : ರೋಟರಿ ಕ್ಲಬ್‌ ಕುಂದಾಪುರ ದಕ್ಷಿಣದ ಸದಸ್ಯರು ವನಮಹೋತ್ಸವವನ್ನು ಮಂಗಳೂರು ಟೈಲ್ಸ್ ಲಿಮಿಟೆಡ್ ಪರಿಸರದಲ್ಲಿ ಆಲ್ ಸೀಸನ್ ಮಾವು, ಮಾಂಗೋಸ್ಟೀನ್, ಸೀಬೆ, ರೆಡ್ ಲೇಡಿ ಪಪ್ಪಾಯಿ ಗಿಡಗಳನ್ನು ನೆಡುವ ಮೂಲಕ  ಆಚರಿಸಿದರು ಮಂಗಳೂರು ಟೈಲ್ಸ್ ಲಿಮಿಟೆಡ್ ಇದರ ಸಿಬಂದಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.

ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷ ಸಚಿನ್ ನಕ್ಕತ್ತಾಯ, ಮಂಗಳೂರು ಟೈಲ್ಸ್ ಲಿಮಿಟೆಡ್ ನಿರ್ದೇಶಕಿ ಮೇಘಾ ರಾವ್, ಸುರೇಶ್ ಮಲ್ಯ, ನಂದಾ ನಾಯಕ್, ಜೆರಾಲ್ಡ್ ಕ್ರಾಸ್ಟಾ ಕಂಪೆನಿ ಸಿಬಂದಿ ಉಪಸ್ಥಿತರಿದ್ದರು.

 

Related Articles

error: Content is protected !!