111
ಕುಂದಾಪುರ : ಕುಂದಾಪುರ ಬಿಜೆಪಿ ಕಚೇರಿಯ ಆವರಣದಲ್ಲಿ ಪಕ್ಷದ ಕಾರ್ಯಕರ್ತರು ಒಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಭಾಗವಹಿಸಿ ಯುವ ಪೀಳಿಗೆಗೆ ಇದರ ಸ್ಪೂರ್ತಿ ತಿಳಿಸಲು ಒಂದೇ ಮಾತರಂ ಗೀತೆ ಕೇವಲ ಮಾತೃಭೂಮಿಯನ್ನು ಹೊಗಳಲು ಮಾತ್ರವಲ್ಲ ದೇಶದ ಬಗ್ಗೆ ಗೌರವ ತ್ಯಾಗ ಮತ್ತು ಸಮರ್ಪಣೆಯ ಭಾವನೆಯನ್ನು ಒಳಗೊಂಡಿದ್ದು ಸಂಸ್ಕೃತಿ ಭಾವನೆಗಳು ಮತ್ತು ಕರ್ತವ್ಯದ ಭಾವನೆಯಿಂದ ನಿರ್ಮಿತವಾಗಿದೆ ಎಂಬುದನ್ನು ನಮಗೆ ನೆನಪಿಸುತ್ತದೆ ಎಂದರು.
ತದನಂತರ ಪಕ್ಷದ ಕ್ಷೇತ್ರಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ಇವರ ಅಧ್ಯಕ್ಷತೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ ಸುಧೀರ್.ಕೆ.ಎಸ್ , ಉಪಸ್ಥಿತಿಯಲ್ಲಿ ಮಂಡಲದ ಎಲ್ಲ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮತ್ತು ಪ್ರಮುಖರು ಕಾರ್ಯಕರ್ತರೊಂದಿಗೆ ನಿಕಟ ಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಅವರ ಜೊತೆಗೂಡಿ ಒಂದೇ ಮಾತರಂ ಗೀತೆಯನ್ನು ಸಾಮೂಹಿಕವಾಗಿ ಹಾಡಿದರು.

