Home » ವೇದ ಪಾಠ ಶಾಲೆಯ ಘಟಿಕೋತ್ಸವ ಸಮಾರಂಭ
 

ವೇದ ಪಾಠ ಶಾಲೆಯ ಘಟಿಕೋತ್ಸವ ಸಮಾರಂಭ

by Kundapur Xpress
Spread the love

ಕೋಟ : ಕಳೆದ ಎರಡು ದಶಕಗಳಿಂದ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಶ್ರಯದಲ್ಲಿ 5 ವರ್ಷಗಳ ಅವಧಿಯ ವೇದ ಶಿಕ್ಷಣದ ಶಾಲೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಉಚಿತ ವಸತಿ, ಅಧ್ಯಾಪನದ ಜೊತೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಹ ಕೊಡಲಾಗುತ್ತಿದ್ದು, ಇದುವರೆಗೆ ಇಲ್ಲಿ ಶಿಕ್ಷಣವನ್ನು ಪೂರೈಸಿದ ಅನೇಕ ವಿದ್ಯಾರ್ಥಿಗಳು ನಾಡಿನ ವಿವಿಧೆಡೆ ವೈದಿಕ ವೃತ್ತಿಯಲ್ಲಿ ತೊಡಗಿಸಿಕೊಂಡು ಹೆಸರುವಾಸಿಯಾಗಿರುವುದು ಕ್ಷೇತ್ರದ ಮಹಿಮೆಯೆನ್ನಬಹುದು ಎಂದು ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಪಾಠಶಾಲೆಯ ಸಂಚಾಲಕ ಡಾ.ಕೆ.ಎಸ್.ಕಾರಂತ ತಿಳಿಸಿದರು.

ಇತ್ತೀಚಿಗೆ ಸಾಲಿಗ್ರಾಮ ದೇವಳದ ಆಗಮ ನಿಗಮಾಗಮ ವೇದ ಪಾಠ ಶಾಲೆಯ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು
ಈ ವೇಳೆ ನಾಲ್ವರು ಯಶಸ್ವಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಿದ ಅವರು ಮೇ ತಿಂಗಳಿನ ೨೦ ರಿಂದ ನೂತನ ವರ್ಷದ ಪ್ರವೇಶಾತಿ ಪ್ರಕ್ರಿಯೆಯು ಪ್ರಾರಂಭವಾಗಲಿದೆಯೆAದು ಘೋಷಿಸಿದರು. ಘಟಿಕೋತ್ಸವದಲ್ಲಿ ಆಡಳಿತ ಮಂಡಳಿಯ ಪೂರ್ವ ಅಧ್ಯಕ್ಷ ಎ.ಜಗದೀಶ ಕಾರಂತ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಕಾರ್ಯಕಾರಿಣಿ ಸದಸ್ಯ ಹಾಗೂ ಕೂ ಮ ಜಗತ್ತು ಕೇಂದ್ರ ಸಂಸ್ಥೆಯ ಮಾಜೆ ಉಪಾಧ್ಯಕ್ಷ ಶ್ರೀ ಕೆ.ತಾರಾನಾಥ ಹೊಳ್ಳ, ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ ಮತ್ತು ಸಾಲಿಗ್ರಾಮ ಅಂಗಸAಸ್ಥೆಯ ಅಧ್ಯಕ್ಷ ಪಿ.ಸಿ.ಹೊಳ್ಳ ಮುಂತಾದವರು ಪದವೀಧರರಿಗೆ ಶುಭವನ್ನು ಹಾರೈಸಿದರು. ಕೋಶಾಧಿಕಾರಿ ಪರಶುರಾಮ ಭಟ್ಟರು ಧನ್ಯವಾದಗಳನ್ನು ಅರ್ಪಿಸಿದರು.

 

Related Articles

error: Content is protected !!