ಉಡುಪಿ : ವಿಶ್ವ ಹಿಂದೂ ಪರಿಷತ್ 60ನೇ ವರ್ಷಾಚರಣೆಯ ಅಂಗವಾಗಿ ಉಡುಪಿಯಲ್ಲಿ ಮಂಗಳವಾರ ಭವ್ಯವಾದ ಶೌರ್ಯ ಜಾಗರಣ ರಥಯಾತ್ರೆಯು ವಿಜೃಂಣೆಯಿಂದ ನಡೆಯಿತು

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಪುಣೆಯ ಸಾಮಾಜಿಕ ಮುಖಂಡ ವಿಶ್ವನಾಥ್ ಪೂಜಾರಿ ಶೌರ್ಯ ಜಾಗರಣ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿದರು ಜೋಡುಕಟ್ಟೆಯಿಂದ ಆರಂಭವಾದ ರಥ ಯಾತ್ರೆಯು ಕೋರ್ಟ್ ರಸ್ತೆ ಕೆ ಎಂ ಮಾರ್ಗ ಸರ್ವಿಸ್ ಬಸ್ ನಿಲ್ದಾಣ ಸಿಟಿ ಬಸ್ ನಿಲ್ದಾಣದ ಮೂಲಕ ಸಾಗಿಬಂದು ಎಂ ಜಿ ಎಂ ಮೈದಾನದಲ್ಲಿ ಸಂಪನ್ನಗೊಂಡಿತು ಸಾವಿರಾರು ಹಿಂದೂ ಕಾರ್ಯಕರ್ತರ ಜೈ ಶ್ರೀ ರಾಮ್ ಘೋಷವಾಕ್ಯದೊಂದಿಗೆ ನಡೆದ ರಥಯಾತ್ರೆಯಲ್ಲಿ 15 ಸಾವಿರಕ್ಕೂ ಹೆಚ್ಚು ಯುವಕ ಯುವತಿಯರು ಮಹಿಳೆಯರು ಹಾಗೂ ಹಿರಿಯರು ಪಾಲ್ಗೊಂಡರು
ಯಾತ್ರೆಯಲ್ಲಿ ಕುಣಿತಭಜನೆ ಕೇರಳಚಂಡೆ, ನಾಸಿಕ್ ಬ್ಯಾಂಡ್ ಕಹಳೆ ತಟ್ಟಿರಾಯ ಶ್ರೀರಾಮ ಸೀತೆ ಆಂಜನೇಯ ಸ್ವಾಮಿಗಳ ಸ್ತಬ್ಧ ಚಿತ್ರಗಳು ಗಮನಸೆಳೆಯಿತು ಮೆರವಣಿಗೆಯಲ್ಲಿ ಆರ್ ಎಸ್ ಎಸ್ ನ ಹಿರಿಯ ಮುಖಂಡರಾದ ಶಂಬು ಶೆಟ್ಟಿ ದಿನೇಶ್ ಮೆಂಡನ್ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಗುರುರಾಜ್ ಗಂಟಿಹೊಳೆ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ ನಾಯಕ್ ವಿಭಾಗ ಪ್ರಭಾರಿ ಉದಯ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು


