ಕೋಟ : ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಇದರ ಅಂಗ ಸಂಸ್ಥೆಯಾದ ವಿಶ್ವಜ್ಯೋತಿ ಮಹಿಳಾ ಬಳಗದ ಅಧ್ಯಕ್ಷರಾಗಿ ರಮ್ಯಾ ರಮೇಶ್ ಆಚಾರ್ಯ ಚೇಂಪಿ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಸವಿತಾ ಚಂದ್ರಶೇಖರ್ ಆಚಾರ್ಯ,ಉಪಾಧ್ಯಕ್ಷರಾಗಿ ಸರಿತಾ ಚಂದ್ರ ಆಚಾರ್ಯ ಕಾರ್ಕಡ ,ಕಾರ್ಯದರ್ಶಿಯಾಗಿ ಸಹನಾ ರಾಘವೇಂದ್ರ ಆಚಾರ್ಯ ಪಾರಂಪಳ್ಳಿ, ಜೊತೆ ಕಾರ್ಯದರ್ಶಿಯಾಗಿ ಪುಷ್ಪ ಶ್ರೀಕಾಂತ್ ಆಚಾರ್ಯ ಪಾರಂಪಳ್ಳಿ ,ಕೋಶಾಧಿಕಾರಿಯಾಗಿ ಸುಶೀಲ ಸತೀಶ್ ಆಚಾರ್ಯ ಸಾಲಿಗ್ರಾಮ, ಕ್ರೀಡಾ ಕಾರ್ಯದರ್ಶಿಯಾಗಿ ಭಾರತಿ ಕೃಷ್ಣಯ್ಯ ಆಚಾರ್ಯ ಗುಂಡ್ಮಿ, ಮಾಲತಿ ಉದಯ ಆಚಾರ್ಯ ಐರೋಡಿ, ಹಾಗೂ ಸಂಘದ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಗ್ರಾಮವಾರು ಸದಸ್ಯರನ್ನು ಇದೇ ವೇಳೆ ಆಯ್ಕೆ ಮಾಡಲಾಯಿತು. ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನೆರವೇರಿತು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷರಾದ ಜನಾರ್ಧನ್ ಆಚಾರ್ಯ. ವಿಶ್ವಕರ್ಮ ಕಲಾ ವೃಂದದ ಅಧ್ಯಕ್ಷರಾದ ವೆಂಕಟೇಶ್ ಆಚಾರ್ಯ. ಹಾಗೂ ವಿಶ್ವಜ್ಯೋತಿ ಮಹಿಳಾ ಬಳಗದ ನಿಕಟಪೂರ್ವ ಅಧ್ಯಕ್ಷರಾದ ಸವಿತಾ ಚಂದ್ರಶೇಖರ್ ಆಚಾರ್ಯ. ಕಾರ್ಯದರ್ಶಿ ವಾಣಿ ಸುರೇಶ ಆಚಾರ್ಯ. ಉಪಸ್ಥಿತರಿದ್ದರು.