Home » ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ : ಯೋಗ ದಿನಾಚರಣೆ
 

ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ : ಯೋಗ ದಿನಾಚರಣೆ

by Kundapur Xpress
Spread the love

ತೆಕ್ಕಟ್ಟೆ : ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ ತೆಕ್ಕಟ್ಟೆಯಲ್ಲಿ ಅಂತರಾಷ್ಟ್ರೀಯ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ಕೆ.ಪಿ.ಟಿಸಿ.ಎಲ್.ನ ಜೂನಿಯರ್ ಎಂಜಿನಿಯರ್ ಗಣೇಶ್ ಹಾಗೂ ಗೌರವ ಅತಿಥಿಗಳಾಗಿ ಆಗಮಿಸಿದ ಶಾಲಾ ಮ್ಯಾನೇಜಿಂಗ್ ಟ್ರಸ್ಟಿ ಪ್ರೇಮಾ ಕ್ಲಿನಿಕ್ ವೈದ್ಯರಾದ ಡಾ. ಕುಸುಮಾಕರ ಶೆಟ್ಟಿಯವರು ವಿವಿಧ ಯೋಗಾಸನಗಳನ್ನು ಮಾಡಿ ಯೋಗ ಪ್ರಾತ್ಯಕ್ಷತೆಯನ್ನು ನೀಡಿದರು

ಆರೋಗ್ಯ ಪೂರ್ಣ ಜೀವನ ನಡೆಸಲು ಮನುಷ್ಯನ ಶರೀರಕ್ಕೆ ಯೋಗ ಬಹಳ ಮುಖ್ಯ ಎಂದು ತಿಳಿಸಿದ ಅವರು ವಿವಿಧ ಕಾಯಿಲೆಗಳನ್ನು ತಡೆಗಟ್ಟುವ ವಿವಿಧ ಆಸನಗಳು ಹಾಗೂ ಅದರ ಮಹತ್ವವನ್ನು ತಿಳಿಸಿದರು. ನುರಿತ ಮಾರ್ಗದರ್ಶಕರಿಂದ ಯೋಗ ತರಭೇತಿ ಪಡೆದು ಯೋಗಾಭ್ಯಾಸವನ್ನು ನಿರಂತರವಾಗಿ ಮುನ್ನಡೆಸಿ ಶರೀರವನ್ನು ಸದೃಢವಾಗಿರಿಸಿಕೊಳ್ಳ ಬಹುದು ಎಂದು ನುಡಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್ ಪ್ರಭಾಕರ ಶೆಟ್ಟಿಯವರು ಮಾತನಾಡಿ ಭಾರತೀಯ ಸಂಸ್ಕ್ರತಿಯ ಅಂಗವಾಗಿರುವ ಯೋಗದಿಂದ ಇಡೀ ವಿಶ್ವವೇ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯೋಗಾಭ್ಯಾಸವನ್ನು ಮೈಗೂಡಿಸಿಕೊಂಡಲ್ಲಿ ಆರೋಗ್ಯಪೂರ್ಣ ಜೀವನ ನಡೆಸಲು ಅನುಕೂಲವೆಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀ ನಿತಿನ್ ಡಿ’ ಆಲ್ಮೇಡಾ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ತಾರುಣ್ಯ ಕರ‍್ಯಕ್ರಮ ನಿರೂಪಿಸಿದರು, ಸನ್ನಿಧಿ ಭಂಡಾರಿ ಸ್ವಾಗತಿಸಿದರು, ಅದ್ನಾನ್ ವಂದಿಸಿದರು.

 

Related Articles

error: Content is protected !!