104
ಕೋಟ : ಸಿಂಧೂರ ಸಂಜೀವಿನಿ ಒಕ್ಕೂಟ ಕೋಟತಟ್ಟು ಗ್ರಾಮ ಪಂಚಾಯತ್ ಇವರ ಆಶ್ರಯದಲ್ಲಿ ವಿಶ್ಚ ಮಹಿಳಾ ದಿನಾಚರಣೆಯ ಪ್ರಯುಕ್ತ ಅಂಗೈಯಲ್ಲಿ ಅರೋಗ್ಯ ಕಾರ್ಯಕ್ರಮದಲ್ಲಿ ರೇಖಿ ಚಿಕಿತ್ಸಾ ತಜ್ಞ ನಾರಾಯಣ ಆಚಾರ್ ಕಾರ್ಕಡ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಹಿಳೆಯರ ಅರೋಗ್ಯದ ಬಗ್ಗೆ ಅಂಗೈಯಲ್ಲಿ ಅಕ್ಯುಪ್ರೆಶರ್ ಪಾಯಿಂಟ್‌ಗಳನ್ನು ಒತ್ತುವುದರ ಮೂಲಕ ಖಾಯಿಲೆಗಳನ್ನು ಹೇಗೆ ಗುಣಪಡಿಸಬಹುದು ಸಮಗ್ರವಾಗಿ ಮಾಹಿತಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಸಂಗೀತ ವಹಿಸಿದ್ದರು.
ಈ ಸಂದರ್ಭದಲ್ಲಿ ಪಂಚಾಯತ್ ನ ಕಾರ್ಯದರ್ಶಿ ಸುಮತಿ ಅಂಚನ್, ಸದಸ್ಯರಾದ ವಾಸು ಪೂಜಾರಿ, ವಿದ್ಯಾ ಸಾಲ್ಯಾನ್ ಉಪಸ್ಥಿತರಿದ್ದರು ಒಕ್ಕೂಟದ ಎಂಬಿಕೆ ವಾಣಿ ಸುರೇಶ ಆಚಾರ್ ಸ್ವಾಗತಿಸಿ ವಂದಿಸಿದರು.ಸಂಜೀವಿನಿಯ ವಸಂತಿ ಹಂದಟಟ್ಟು ಕಾರ್ಯಕ್ರಮ ನಿರೂಪಿಸಿದರು.

