Home » ಅಂಗನವಾಡಿಯಲ್ಲಿ ವಿಶ್ವಯೋಗ ದಿನಾಚರಣೆ
 

ಅಂಗನವಾಡಿಯಲ್ಲಿ ವಿಶ್ವಯೋಗ ದಿನಾಚರಣೆ

by Kundapur Xpress
Spread the love

ಕೋಟ: ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಬೆಂಗ್ರೆ ಅಂಗನವಾಡಿಯಲ್ಲಿ ಶುಕ್ರವಾರ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ವಿಶ್ವಯೋಗ ದಿನಾಚರಣೆ ಆಚರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಇವರು ಆಯುಷ್ ಇಲಾಖೆ ಮೂಲಕ ಕೋಡಿ ಹೊಸಬೆಂಗ್ರೆ ಅಂಗನವಾಡಿ ಕಾರ್ಯಕರ್ತೆ ಯಮುನಾ ತರಬೇತಿ ಪಡೆದು ಅಂಗನವಾಡಿಯಲ್ಲಿ ಕಾರ್ಯಕ್ರಮ ಸಂಯೋಜಿಸಿದರು. ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೋಡಿ ಗ್ರಾಮಪಂಚಾಯತ್ ಸಂಜೀವಿನಿ ಸಂಘದ ಅಧ್ಯಕ್ಷೆ ದೀಪಾ ಆರ್ ಖಾರ್ವಿ, ಅಂಗನವಾಡಿ ಬಾಲವಿಕಾಸ ಸಮಿತಿಯ ಸದ್ಯಸ್ಯೆ ನಿರ್ಮಲ ,ಸ್ತಿçಶಕ್ತಿ ಸಂಘದ ಪದಾಧಿಕಾರಿಗಳು ಮತ್ತು ಸದ್ಯಸರು ಹಾಗೂ ಪೋಷಕರು ಉಪಸ್ಥಿತರಿದ್ದರು. ಅಂಗನವಾಡಿ ಸಹಾಯಕಿ ರೋಹಿಣಿ ವಂದಿಸಿದರು.

ಕೋಡಿ ಹೊಸಬೆಂಗ್ರೆ ಅಂಗನವಾಡಿಯಲ್ಲಿ ವಿಶ್ವಯೋಗ ದಿನಾಚರಣೆಯ ಪ್ರಯುಕ್ತ ಅಂಗನವಾಡಿ ಕಾರ್ಯಕರ್ತೆ ಯಮುನಾ ಯೋಗತರಬೇತಿ ನೀಡಿದರು. ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ , ಕೋಡಿ ಗ್ರಾಮಪಂಚಾಯತ್ ಸಂಜೀವಿನಿ ಸಂಘದ ಅಧ್ಯಕ್ಷೆ ದೀಪಾ ಆರ್ ಖಾರ್ವಿ ಮತ್ತಿತರರು ಇದ್ದರು.

   

Related Articles

error: Content is protected !!