ಕೋಟ: ಇಲ್ಲಿನ ಕೋಡಿ ಗ್ರಾಮ ಪಂಚಾಯತ್ ಸಮನ್ವಯ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಇದರ 2023-24ನೇ ಸಾಲಿನ ವಾರ್ಷಿಕ ಮಹಾ ಸಭೆಯು ಇತ್ತೀಚಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೀವಿನಿ ಒಕ್ಕೂಟ ಸಂಘದ ಅಧ್ಯಕ್ಷೆ ದೀಪಾ ಖಾರ್ವಿ ವಹಿಸಿದ್ದರು.
ಕಾರ್ಯಕ್ರಮಕ್ಕೆ ಕೋಡಿ ಗ್ರಾಮ ಪಂಚಾಯತ್ ಅಧ್ರಕ್ಷೆ ಗೀತಾ ಖಾರ್ವಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ರವೀಂದ್ರ ರಾವ್ ಕೋಡಿ ಗ್ರಾಮ ಪಂಚಾಯತ್‍ನ ಎಸ್‍ಎಲ್‍ಆರ್‍ಎಮ್ ಘಟಕದ ಕಾರ್ಯಕರ್ತರಿಗೆ ಸನ್ಮಾನ ಮಾಡುವುದರ ಮೂಲಕ ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ ಸ್ವಾವಲಂಬನೆ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು. ಹಾಗೂ ಗಿಡಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷ ಪ್ರಭಾಕರ ಮೆಂಡನ್, ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿ ಪಿ, ಸತೀಶ್ ಜಿ ಕುಂದರ್, ಎನ್‍ಆರ್‍ಎಲ್‍ಎಮ್ ಏಕ ವ್ಯಕ್ತಿ ಸಮಾಲೋಚನ ಪಾಂಡುರಂಗ, ಕೆನರಾ ಬ್ಯಾಂಕ್ ಸಾಸ್ತಾನ ಮ್ಯಾನೇಜರ್ ಪ್ರಜಿನ್, ಸಂಜೀವಿನಿ ಒಕ್ಕೂಟ ಕಾರ್ಯದರ್ಶಿ ಚಿತ್ರಾಕ್ಷಿ, ಗ್ರಾಮ ಪಂಚಾಯತ್ ಸಿಬ್ಬಂದಿಯವರು ಹಾಗೂ 120 ಕ್ಕೂ ಸಂಜೀವಿನಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಒಕ್ಕೂಟದ ಎಲ್‍ಸಿಆರ್‍ಪಿ ಆಶಾದೇವಿ ಸ್ವಾಗತಿಸಿದರು,ಸುಶೀಲಾ ಪ್ರಾರ್ಥಿಸಿದರು. ಡೆಲ್ಫಿನಾ ಗತ ಸಭೆಯ ನಡಾವಳಿ ಹಾಗೂ ಜಮಾ ಖರ್ಚುಗಳನ್ನು ಸಭೆಯಲ್ಲಿ ಮಂಡಿಸಿದರು. ಅನಿತಾ ಎಂಬಿಕೆ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.