68
ಕೋಟ : ಇಲ್ಲಿನ ಆಲಿತೋಟ ಮೊಗವೀರ ಗ್ರಾಮಸಭಾ ವಾರ್ಷಿಕ ಮಹಾಸಭೆ ಗುಂಡ್ಮಿಯ ಲಕ್ಷ್ಮೀ ಸೋಮಬಂಗೇರ ಸಭಾಭವನದಲ್ಲಿ ಇತ್ತೀಚಿಗೆ ಜರಗಿತು. ಇದರ ಸಭಾಧ್ಯಕ್ಷತೆಯನ್ನು ಮೊಗವೀರ ಗ್ರಾಮಸಭಾ ಅಧ್ಯಕ್ಷ ರಾಜು ಅಮೀನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೊಗವೀರ ಗ್ರಾಮಸಭಾ ಗೌರವಾಧ್ಯಕ್ಷ ಶಿವ ಕರ್ಕೇರ, ಉದ್ಯಮಿಗಳಾದ ವಿನೋದ್ ಕುಮಾರ್ ಚೆಲ್ಲಿಮಕ್ಕಿ,ಅಮಿತ್ ಕರ್ಕೇರ ಹಾಗೂ ಬೆಣ್ಣೆಕದ್ರು ಸಂಯುಕ್ತ ಸಭಾದ ಸದಸ್ಯರಾದ ಸತೀಶ್ ಮರಕಾಲ ಸಾಲಿಗ್ರಾಮ,ಮೊಗವೀರ ಗುರಿಕಾರರಾದ ನರಸಿಂಹ ಕುಂದರ್ ಹಾಗೂ ತಿಮ್ಮ ಮರಕಾಲ ಉಪಸ್ಥಿತರಿದ್ದರು.ಇದೇ ವೇಳೆ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗ್ತೂ ದ್ವಿತೀಯ ಪಿ.ಯು.ಸಿಯಲ್ಲಿ ಕರ್ನಾಟಕ ರಾಜ್ಯಕ್ಕೆ ೮ನೇ ಸ್ಥಾನ ಗಳಿಸಿದ ಅಶ್ವಿಭಿ ಕುಂದರ್ ಇವರನ್ನು ಸನ್ಮಾನಿಸಲಾಯಿತು .ಈ ಸಭೆಯಲ್ಲಿ ಗ್ರಾಮಸಭಾದ ಸರ್ವಸದಸ್ಯರು ಹಾಜರಿದ್ದರು ಕಾರ್ಯಕ್ರಮವನ್ನು ಸಭಾದ ಕಾರ್ಯದರ್ಶಿ ರಾಜು ಕರ್ಕೇರ ನಿರ್ವಹಿಸಿ ವಂದಿಸಿದರು.

