ಕುಂದಾಪುರ : ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಏಳು ದಿನಗಳ ಯೋಗ ಶಿಬಿರ ಪ್ರಾರಂಭವಾಯಿತು ಕೋಟೇಶ್ವರದ ವೈದ್ಯರಾದ ಮಿತ್ರ ಕ್ಲಿನಿಕ್ ಡಾ.ರಾಜೇಶ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಯೋಗದ ಮಹತ್ವವನ್ನು ತಿಳಿಸಿದರು. ಕೋಟೇಶ್ವರ ರೋಟರಿ ಕ್ಲಬ್ ಭಾವಿ ಅಧ್ಯಕ್ಷರಾದ ಶ್ರೀಯುತ ಜಗದೀಶ ಮೊಗವೀರ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಓಂ ಯೋಗ ವಿದ್ಯಾ ಮಂದಿರ ವ್ಯವಸ್ಥಾಪಕ ಶ್ರೀ ಬಿ. ಅಣ್ಣಪ್ಪ ಶೆಟ್ಟಿಗಾರ್ ಯೋಗ ತರಗತಿಯನ್ನು ನಡೆಸಿಕೊಟ್ಟರು,
ಶ್ರೀಮತಿ ಗೀತಾ ಕಾರ್ಯಕ್ರಮದ ನಿರೂಪಣೆ ಮಾಡಿದರು, ಚಿರಂಜೀವಿ ಧನ್ವಿಪ್ರಸಾದ್ ಮತ್ತು ಸಾಧ್ವಿಪ್ರಸಾದ್ ಪ್ರಾರ್ಥನೆ ನಡೆಸಿಕೊಟ್ಟರು. ಕೋಟೇಶ್ವರ ಗ್ರಾಮ ವಿಕಾಸ ಸಮಿತಿ ಸಂಯೋಜಕ ಶ್ರೀ ರಾಮಚಂದ್ರ ಗಾಣಿಗ ಅತಿಥಿಗಳಿಗೆ ಧನ್ಯವಾದ ಅರ್ಪಿಸಿದರು, ರೋ ಚಂದ್ರಶೇಖರ ಶೆಟ್ಟಿ ವೇದಿಕೆಯಲ್ಲಿದ್ದರು ಜೂನ್ 21 ವಿಶ್ವಯೋಗ ದಿನದಂದು ಸಂಜೆ 5.30 ಕ್ಕೆ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ