ಕುಂದಾಪುರ : ಕುಂದಾಪುರ ನಗರದ ಪಡುಕೇರಿಯ ಯುವ ಮಿತ್ರ ವೃಂದ ಮತ್ತು ಅರಣ್ಯ ಇಲಾಖೆ, ಕುಂದಾಪುರ ವಲಯ ಇವರ ವತಿಯಿಂದ 2024-2025 ನೇ ಸಾಲಿನ ವನಮಹೋತ್ಸವ ಕಾರ್ಯಕ್ರಮವು ದಿನಾಂಕ 14/07/2024 ರವಿವಾರ, ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನದ ವಠಾರದಲ್ಲಿ ಜರುಗಿತು

ಕಾರ್ಯಕ್ರಮಕ್ಕೆ ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ನಾಗರಾಜ ಕಾಮಧೇನು ಮತ್ತು ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾರವರು ವಿಶೇಷ ತಳಿಯ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿದರು ಸಂಘದ ಪಧಾಧಿಕಾರಿಗಳು, ಸದಸ್ಯರು ಮತ್ತು ಪಡುಕೇರಿಯ ಪಡುಕೇರಿ ವಠಾರದ ಸಾರ್ವಜನಿಕರು ವನಮಹೋತ್ಸವದಲ್ಲಿ ಪಾಲ್ಗೊಂಡರು
ವಿಶೇಷ ತಳಿಯ ಹೂವಿನ ಗಿಡಗಳನ್ನು, ಬಿಲ್ವ ಪತ್ರೆ, ಸಂಪಿಗೆ ಮತ್ತಿತರ ಪವಿತ್ರ ಗಿಡಗಳನ್ನು ದೇವಸ್ಥಾನದ ವಠಾರದಲ್ಲಿ ನೆಡಲಾಯಿತು. ಹಾಗೆಯೇ ವಿವಿಧ ತಳಿಯ ಗಿಡಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು.
ಯುವ ಮಿತ್ರ ವೃಂದ, ಪಡುಕೇರಿ, ಕುಂದಾಪುರ ಇದರ ನೂತನ ಅಧ್ಯಕ್ಷರಾಗಿ ಅಯ್ಕೆಯಾದ ಶ್ರೀ ಅಮರ್ ಕುಮಾರ್ ರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಅರ್ಪಿಸಿದರು

