ಕುಂದಾಪುರ : ನಗರದ ಪಡುಕೇರಿಯ ಯುವ ಮಿತ್ರವೃಂದ ಶ್ರೀ ಚಿಕ್ಕಮ್ಮದೇವಿ ದೇವಸ್ಥಾನದ ವತಿಯಿಂದ ನಡೆದ ಕೆಸ್ರ್ ಗೆದ್ದಿಯoಗ್ ಒಂದ್ ದಿನದ- ಕೈ ಕೈ ಸೇರ್ಲಿ ಕೆಸ್ರ್ ನೀರ್ ಹಾರ್ಲಿ ಕಾರ್ಯಕ್ರಮವು
ದಿನಾಂಕ 18/08/2024 ರಂದು ಆದಿತ್ಯವಾರ ಬೆಳಿಗ್ಗೆ 9:00 ಕ್ಕೆ ರಿಬ್ಬನ್ ಕತ್ತರಿಸುವ ಮೂಲಕ ಮಾಜಿ ಪುರಸಭಾ ಸದಸ್ಯರಾದ ಶ್ರೀ ರಮೇಶ್ ರವರು ಸಾಂಕೇತಿಕವಾಗಿ ಉದ್ಘಾಟಿಸಿದರು


ಸಭಾ ಕಾರ್ಯಕ್ರಮವನ್ನು ಶ್ರೀ ಚಿಕ್ಕಮ್ಮದೇವಿ ದೇವಸ್ಥನಾದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ನಾಗರಾಜ್ ಕಾಮಧೇನು ಮತ್ತು ಶ್ರೀ ರಾಜೇಶ್, ಬೆಂಗಳೂರು ಅವರು ತೆಂಗಿನ ಹೂವನ್ನು ಅರಳಿಸುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಉಪಹಾರದ ಮತ್ತು ಭೋಜನಾ ವ್ಯವಸ್ಥೆಯನ್ನು ಮಾಡಲಾಗಿತ್ತು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲರಿಗೂ ಶ್ರೀ ಕಿರಣ್ CA ಮತ್ತು ಶ್ರೀಮತಿ ಅಶ್ವಿನಿ ಪ್ರದೀಪ್, ಕೌನ್ಸಿಲರ್, ಕುಂದಾಪುರ ಪುರಸಭೆ ಅವರು ಬಹುಮಾನವನ್ನು ವಿತರಿಸಿದರು
ಕಾರ್ಯಕ್ರಮಕ್ಕೆ ಪಡುಕೇರಿಯ ಮಕ್ಕಳು ಮಹಿಳೆಯರು ಪುರುಷರು ಮತ್ತು ಹಿರಿಯ ನಾಗರಿಕರೂ ಭಾಗವಹಿಸಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.


