Home » ಖ್ಯಾತ ನಿರ್ಧೇಶಕನಿಗೆ 3 ತಿಂಗಳು ಜೈಲು ಶಿಕ್ಷೆ
 

ಖ್ಯಾತ ನಿರ್ಧೇಶಕನಿಗೆ 3 ತಿಂಗಳು ಜೈಲು ಶಿಕ್ಷೆ

ನಿರ್ದೇಶಕ ರಾಮಗೋಪಾಲ್ ವರ್ಮಾ

by Kundapur Xpress
Spread the love

ಮುಂಬೈ :  ಖ್ಯಾತ ನಿರ್ದೇಶಕ ರಾಮಗೋಪಾಲ್ ವರ್ಮಾ ಅವರಿಗೆ ಭಾರೀ ಸಂಕಷ್ಟ ಎದುರಾಗಿದೆ. ಚೆಕ್ ‘ಬೌನ್ಸ್ ಕೇಸ್ ಒಂದರಲ್ಲಿ ಮುಂಬೈ ನ್ಯಾಯಾಲಯ 3 ತಿಂಗಳು ಜೈಲುಶಿಕ್ಷೆ ವಿಧಿಸಿದೆ. 2018ರಲ್ಲೇ ವರ್ಮಾ ಅವರ ನೇಲೆ ಚೆಕ್‌ ಬೌನ್ಸ್‌ ಕೇಸ್‌  ದಾಖಲಾಗಿತ್ತು. ಕಳೆದ 7 ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಅಂಧೇರಿ ಮ್ಯಾಜಿಸ್ಟ್ರೇಟ್ ಕೋರ್ಟ್ ಪ್ರಕರಣದ ತೀರ್ಪನ್ನು ಮಂಗಳವಾರಕ್ಕೆ ನಿಗದಿಪಡಿಸಿತ್ತು. ಆದರೆ ವರ್ಮಾ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದರು. ಹೀಗಾಗಿ ಅವರಿಗೆ 3 ತಿಂಗಳು ಶಿಕ್ಷೆ ವಿಧಿಸಿದ ಬಳಿಕ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಆಲ್ಲದೆ. 3.72 ಲಕ್ಷ ರು. ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.

ಏನಿದು ಪ್ರಕರಣ ?

2018ರಲ್ಲಿ ಮಹೇಶಚಂದ್ರ ಮಿಶ್ರಾ ಎಂಬವರ ‘ಶ್ರೀ’ ಹೆಸರಿನ ಕಂಪನಿಯು ವರ್ಮಾ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಲಿಸಿತ್ತು. ಈ ಕೇಸಲ್ಲಿ 2022ರಲ್ಲಿ ವರ್ಮಾ ಜಾಮೀನು ಪಡೆದಿದ್ದರು ಮತ್ತು  ಗೈರು ಹಾಜರಾಗಿದ್ದರು. ಹೀಗಾಗಿ ಅವರಿಗೆ 3 ತಿಂಗಳು ಶಿಕ್ಷೆ ವಿಧಿಸಿದ ಬಳಿಕ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಆಲ್ಲದೆ. 3.72 ಲಕ್ಷ ರು. ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.

 

Related Articles

error: Content is protected !!