ಚಳ್ಳಕೆರೆ : ಬೈಕ್ ನಲ್ಲಿ ಬಂದು ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಕೊನೆಗೂ ಬಂಧಿಸುವಲ್ಲಿ ಚಳ್ಳಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಅನೇಕ ದಿನಗಳಿಂದ ರೋಷನ್ ಎಂಬ ಆರೋಪಿ ಕಳ್ಳತನ ಮಾಡಿ ಎಸ್ಕೆಪ್ ಆಗುತ್ತಿದ್ದ. ಹೀಗಾಗಿ ಈತನ ಕೈಚಳಕ ಚಳ್ಳಕೆರೆ ಪೊಲೀಸರಿಗೆ ಬಾರಿ ತಲೆನೋವು ಎನಿಸಿದ್ದು ಭರ್ಜರಿ ಕಾರ್ಯಚರಣೆ ನಡೆಸಿರುವ ಚಳ್ಳಕೆರೆ ಪೊಲೀಸರು ಹಿರಿಯೂರು ತಾಲೂಕಿನ ಖಂಡನೇಹಳ್ಳಿ ಗ್ರಾಮದ ಆರೋಪಿ ರೋಷನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯಿಂದ 10 ಲಕ್ಷ ಮೌಲ್ಯದ 7 ಮಾಂಗಲ್ಯ ಸರಗಳು, 2 ಲಕ್ಷ ಮೌಲ್ಯದ ಎರಡು ಬೈಕ್‌ಗಳು ಸೇರಿದಂತೆ 12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.