Home » “ಶ್ರೀ ಕೃಷ್ಣ ಕಥಾ ವಾಚನ” ಸ್ಪರ್ಧೆ
 

“ಶ್ರೀ ಕೃಷ್ಣ ಕಥಾ ವಾಚನ” ಸ್ಪರ್ಧೆ

by Kundapur Xpress
Spread the love

ಕುಂದಾಪುರ  : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಹಾಗೂ ಗಣಕ ವಿಜ್ಞಾನ ವಿಭಾಗದ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸೆಪ್ಟೆಂಬರ್ 06 ರಂದು ನಡೆದ “ಶ್ರೀ ಕೃಷ್ಣ ಕಥಾ ವಾಚನ” ಸ್ಪರ್ಧೆಯಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಶ್ರೀ ಕೃಷ್ಣ ಬಾಲ ಲೀಲೆ, ಕೃಷ್ಣ ಕುಚೇಲ ಸ್ನೇಹ, ರಾಧಾ ಕೃಷ್ಣ ಪ್ರಸಂಗ, ಮಹಾಭಾರತ ಯುದ್ಧ ಮೊದಲಾದ ಕೃಷ್ಣನ ಜೀವನ ಚರಿತ್ರೆಯನ್ನೊಳಗೊಂಡ ಕಥೆಗಳನ್ನು ಸುಂದರವಾಗಿ ವರ್ಣಿಸಿದರು.
ಕಾರ್ಯಕ್ರಮದಲ್ಲಿ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಕಾಲೇಜಿನ ಆಡಳಿತ ನಿಕಾಯಕರು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಕುಮಾರ್, ಇತರ ಪ್ರಾಧ್ಯಾಪಕರು ಹಾಗೂ ವೀಕ್ಷಕ ವಿದ್ಯಾರ್ಥಿಗಳು ಉಪಸ್ಥಿತರಿದ್ದ ಈ ಸ್ಪರ್ಧೆಯಲ್ಲಿ ದೀಪಿಕಾ ಪ್ರಥಮ ಬಿಸಿಎ (ಎ) ವಿಭಾಗ ಪ್ರಥಮ ಬಹುಮಾನ ಹಾಗೂ ಸುಜಯ್ ಶೆಟ್ಟಿ ತೃತೀಯ ಬಿ.ಕಾಂ (ಇ) ವಿಭಾಗ ದ್ವಿತೀಯ ಬಹುಮಾನವನ್ನು ಗಳಿಸಿದರು.
ಗಣಕಶಾಸ್ತç ಪ್ರಾಧ್ಯಾಪಕ ಕಾರ್ಯಕ್ರಮದ ಸಂಯೋಜಕರಾದ ಶ್ರೀ ಹರೀಶ್ ಕಾಂಚನ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

 

Related Articles

error: Content is protected !!