Home » ವೃಕ್ಷ ಮಾತೆಗೆ ನುಡಿ ನಮನ
 

ವೃಕ್ಷ ಮಾತೆಗೆ ನುಡಿ ನಮನ

by Kundapur Xpress
Spread the love

ಕುಂದಾಪುರ : ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅನಕ್ಷರಸ್ಥೆಯಾಗಿಯೂ ಅವರು ಮಾಡಿದ ಕಾರ್ಯ ಶಿಕ್ಷಣವಂತರಾದ ನಮಗೆಲ್ಲರಿಗೂ ಮಾದರಿ. ಹೀಗಾಗಿ ಅಗಲಿದ ಹಿರಿಯ ಜೀವಕ್ಕೆ ಶಾಂತಿ ಕೋರುವ ಮೂಲಕ ಅವರ ಜೀವನ ಮೌಲ್ಯಗಳನ್ನುವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ ವೃಕ್ಷ ಮಾತೆಗೆ ನುಡಿನಮನ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಪುಷ್ಪ ನಮನ ಸಲ್ಲಿಸಿ ನುಡಿ ನಮನದ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಆಶಯ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ರೇಷ್ಮಾ ಶೆಟ್ಟಿ ಸ್ವಾಗತಿಸಿ, ಶ್ರೀಮತಿ ಪ್ರವೀಣಾ ಎಮ್. ಪೂಜಾರಿ ವಂದಿಸಿ, ರಶ್ಮಿತಾ ಶೆಟ್ಟಿ ನಿರೂಪಿಸಿದರು. ಎಲ್ಲಾ ವಿದ್ಯಾರ್ಥಿಗಳು ಮತ್ತು ಬೋಧಕ-ಬೋಧಕೇತರರು ಉಪಸ್ಥಿತರಿದ್ದು ಮೌನ ಪ್ರಾರ್ಥನೆ ಸಲ್ಲಿಸಿದರು.

 

Related Articles

error: Content is protected !!