Home » ಗಜೇಂದ್ರ ಮೂರ್ತಿ ಎಂ ಎನ್ ಜಿಲ್ಲಾ ಮಟ್ಟಕ್ಕೆ ಆಯ್ಕೆ
 

ಗಜೇಂದ್ರ ಮೂರ್ತಿ ಎಂ ಎನ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಥ್ರೋ ಬಾಲ್ ಪಂದ್ಯಾಟ

by Kundapur Xpress
Spread the love

ಕುಂದಾಪುರ:ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಗ್ರಾಮೀಣ ಪ್ರದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಯಾಗಿ ಸಮಾಜದಲ್ಲಿ ಗುರುತಿಸಿಕೊಂಡ ಹೆಗ್ಗಳಿಕೆ ಈ ಸಂಸ್ಥೆಯದ್ದಾಗಿದೆ. ವಿದ್ಯಾರ್ಥಿಗಳ ಜೀವನದ ಆಶಾಕಿರಣವಾಗಿ ಈಡೀ ರಾಜ್ಯವೇ ಹೆಮ್ಮೆಯಿಂದ ಗುರುತಿಸಿದ ವಿದ್ಯಾಸಂಸ್ಥೆಯಾಗಿದೆ. ಕೇವಲ ಶಿಕ್ಷಣ ಮಾತ್ರವಲ್ಲದೆ ಸಾಂಸ್ಕೃತಿಕ, ಸಾಹಿತ್ಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಈಡೀ ರಾಷ್ಟ್ರವೇ ಗುರುತಿಸುವಂತಹ ಅದ್ಭುತ ಸಾಧನೆಯನ್ನುಗಳಿಸಿದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿದೆ. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಉಡುಪಿ ಜಿಲ್ಲೆ, ಆಯೋಜಿಸಿರುವ ತಾಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾಟ-2025 ಇದರಲ್ಲಿ ಭಾಗವಹಿಸಿದ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿಯಾದ ಗಜೇಂದ್ರ ಮೂರ್ತಿ ಎಂ ಎನ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ್ದಾರೆ. ಈ ಸಾಧನೆಗೈದ ವಿದ್ಯಾರ್ಥಿಗೆ ಸಂಸ್ಥೆಯ ಆಡಳಿತಮಂಡಳಿಯವರು, ಪ್ರಾಂಶುಪಾಲರು, ಶಿಕ್ಷಕ – ಶಿಕ್ಷಕೇತರ ವೃಂದದವರು ಅಭಿನಂದನೆ ಸಲ್ಲಿಸಿ, ಮುಂದಿನ ಜಿಲ್ಲಾ ಮಟ್ಟದಲ್ಲೂ ಅತ್ಯುತ್ತಮ ಸಾಧನೆಯೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿ ಎಂದು ಶುಭಹಾರೈಸಿದ್ದಾರೆ.

 

Related Articles

error: Content is protected !!