ಮೂಡ್ಲಕಟ್ಟೆ : ಐಎಂಜೆ ಪದವಿ ಕಾಲೇಜು ಮೂಡ್ಲಕಟ್ಟೆ ಇದರ ಕಾಮರ್ಸ್ ಮತ್ತು ವ್ಯವಹಾರ ಆಡಳಿತ ಸಂಘದ ಆಶ್ರಯದಲ್ಲಿ 2025-26 ನೇ ಸಾಲಿನಲ್ಲಿ ಕಾಲೇಜಿಗೆ ಸೇರ್ಪಡೆಗೊಂಡ ಪ್ರಥಮ ವರ್ಷದ ಪದವಿಯ ಸಿ.ಎ ಮತ್ತು ಸಿ.ಎಸ್ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಿ.ಎ ಪಾಂಡುರಂಗ ನಾಯಕ್ ರವರು ಸಿ.ಎ ಮತ್ತು ಸಿ.ಎಸ್ ಕೋರ್ಸ್ ನ ಸಂಪೂರ್ಣ ಮಾಹಿತಿಯನ್ನು ವಿವರಿಸಿದರು. ಕೋರ್ಸ್ ನ ವಿವಿಧ ಹಂತಗಳು, ವಿಷಯ, ಪರೀಕ್ಷಾ ತಯಾರಿ, ಮಾನಸಿಕ ಸಿದ್ಧತೆ ಹೀಗೆ ಹಲವು ವಿಷಯಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತ ಮಾತನಾಡಿದ ಅವರು ಸಮಾಜದಲ್ಲಿ ಉತ್ತಮ ಸ್ತರದಲ್ಲಿರುವ ಸಿಎ ಮತ್ತು ಸಿ.ಎಸ್ ಕೋರ್ಸ್ ಅನ್ನು ನಿರಂತರ ಪ್ರಯತ್ನ, ಛಲ ಮತ್ತು ಏಕಾಗ್ರತೆಯಿಂದ ಯಾವ ವಿದ್ಯಾರ್ಥಿಯು ಸಫಲತೆಯನ್ನು ಸಾಧಿಸಬಹುದು ಎಂದರು. ಜಿಲ್ಲೆಯ ನುರಿತ ಸಿ.ಎ, ಸಿ.ಎಸ್ ತರಬೇತುದಾರರಿಂದ ಕಾಲೇಜಿನಲ್ಲಿಯೇ ಕೋಚಿಂಗ್ ವ್ಯವಸ್ಥೆಯನ್ನು ಒದಗಿಸುತ್ತಿರುವ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಗಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ.ಪಟೇಲ್, ಉಪ ಪ್ರಾಂಶುಪಾಲರು ಹಾಗೂ ಐಕ್ಯೂಎಸಿ ಸಂಯೋಜಕರಾದ ಶ್ರೀ ಜಯಶೀಲ್ ಕುಮಾರ್, ವಾಣಿಜ್ಯ ಮತ್ತು ವ್ಯವಹಾರ ವಿಭಾಗದ ಮುಖ್ಯಸ್ಥರು ಮತ್ತು ಸಂಯೋಜಕರಾದ ಶ್ರೀಮತಿ ಅರ್ಚನಾ ಗದ್ದೆ ಉಪಸ್ಥಿತರಿದ್ದರು. ತೃತೀಯ ವರ್ಷದ ಬಿ. ಕಾಂ ವಿದ್ಯಾರ್ಥಿನಿ ಕು. ಆಲ್ಫಿದಾ ಕಾರ್ಯಕ್ರಮವನ್ನು ನಿರೂಪಿಸಿದರು.

