ಕೋಟೇಶ್ವರ: ಸಂವಿಧಾನ ಜಾಗೃತಿ ಜಾಥಾವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದ್ದು, ಭಾರತ ಸಂವಿಧಾನವು ದೇಶದ ಎಲ್ಲಾ ವಿದ್ಯಮಾನಗಳಿಗೆ ಮೂಲಾಧಾರವಾಗಿದೆ. ಸಂವಿಧಾನ ರಚನಾ ಸಭೆಯ ಚರ್ಚೆಗಳ ಮೂಲಕ, ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದ ಬಾಬಾ ಸಾಹೇಬ್ ಅಂಬೇಡ್ಕರ ಅವರ ಅವಿರತ ಶ್ರಮದಿಂದಾಗಿ ನಮ್ಮ ಸಂವಿಧಾನವು ೧೯೫೦ ರ ಜನವರಿ ೨೬ ರಂದು ಜಾರಿಗೆ ಬಂತು. ಇದರ ಪ್ರಯುಕ್ತವಾಗಿ
ಕೋಟೇಶ್ವರದ ವರದರಾಜ ಎಂ. ಶೆಟ್ಟಿ ಸಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಸಂವಿಧಾನದ ಜಾಗೃತಿ ಜಾಥಾ” ಇದರ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ಇವರ ಅಧ್ಯಕ್ಷತೆಯಲ್ಲಿ ಚಾಲನೆಗೊಂಡಿತು. ಅಧ್ಯಕ್ಷತೆಯನ್ನು ಪ್ರಾಂಶುಪಾಲರು ಡಾ. ರಾಜೇಂದ್ರ ಎಸ್. ನಾಯಕ ವಹಿಸಿ ಮಾತನಾಡಿ ಭಾರತ ಸಂವಿಧಾನದ ಮೂಲತತ್ವವು ಅದರ ಪೀಠಿಕೆಯಾಗಿದೆ. ಭಾರತವನ್ನು ಸಾರ್ವಭೌಮ, ಸಮಾಜವಾದಿ ಜಾತ್ಯಾತೀತ ಹಾಗೂ ಪ್ರಜಾಸತಾತ್ಮಕ ಗಣರಾಜ್ಯದ ಮೌಲ್ಯಗಳಿಗೆ ಅನುಸಾರವಾಗಿ ರೂಪುಗೊಂಡಿದ್ದು, ಇದು ಜನರ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಖಚಿತಪಡಿಸುತ್ತದೆ ಮತ್ತು ಸಂವಿಧಾನದ ದಾರಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ, ಸ್ವಾತಂತ್ರö್ಯ, ಘನತೆ, ಐಕ್ಯತಾ ಪ್ರಜ್ಞೆ ಮತ್ತು ಸಮಾನತೆಯ ವಾತಾವರಣವನ್ನು ಕಲ್ಪಿಸುವುದು ಸರ್ಕಾರದ ಉದ್ದೇಶ ಹಾಗೂ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನುಡಿದರು.
ದಿನಾಂಕ: ೨೬-೦೧-೨೦೨೪ ರಿಂದ ೨೩-೦೨-೨೦೨೪ ರವರೆಗೆ ನಮ್ಮ ಕಾಲೇಜಿನಲ್ಲಿ ಸಂವಿಧಾನದ ಕುರಿತು ಸಂವಾದ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಚರ್ಚಾ ಸ್ಪರ್ಧೆ, ಸಂವಿಧಾನದ ಜಾಗೃತಿ ಜಾಥಾ, ಸಂವಿಧಾನದ ಪೀಠಿಕೆ ಬಗ್ಗೆ ಮನೆ ಮನೆಗೆ ಹೋಗಿ ಮಾಹಿತಿ ನೀಡುವಿಕೆ ಮುಂತಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಮರಾಯ ಆಚಾರ್ಯ, ಐಕ್ಯೂಎಸಿ ಸಂಚಾಲಕರಾದ ನಾಗರಾಜ ಯು ಮತ್ತು ಕನ್ನಡ ವಿಭಾಗ ಮುಖ್ಯಸ್ಥರಾದ ನಾಗರಾಜ ವೈದ್ಯ ಎಂ., ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಸಂತೋಷ ನಾಯ್ಕ ಹೆಚ್, ಗ್ರಂಥಪಾಲಕರಾದ ವೆಟರನ್ ರವಿಚಂದ್ರ ಹೆಚ್.ಎಸ್., ರಾಜ್ಯಶಾಸ್ತç ಉಪನ್ಯಾಸಕಿ ಜ್ಯೋತಿ P.ೆ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಸ್ಪರ್ಧಾಳುಗಳು ಸಹ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಚುನಾವಣಾ ಸಾಕ್ಷರತಾ ಸಂಘದ ಸಂಚಾಲಕರು ಮತ್ತು ರಾಜ್ಯಶಾಸ್ತç ವಿಭಾಗದ ಡಾ. ಭಾಗೀರಥಿ ನಾಯ್ಕ ಸಂವಿಧಾನದ ಪೀಠಿಕೆ ಓದುವಿಕೆಯ ಮೂಲಕ ಪ್ರಾರಂಭಿಸಲಾಯಿತು. ರಕ್ಷಿತಾ ಸ್ವಾಗತಿಸಿ, ಗೌರೀಶರವರು ವಂದಿಸಿದರು.