Home » ಕ್ಲಸ್ಟರ್ ಕ್ರೀಡಾಕೂಟ: ಬಾಲಕ ಮತ್ತು ಬಾಲಕಿಯರ ಸಮಗ್ರ ತಂಡ ಪ್ರಶಸ್ತಿ
 

ಕ್ಲಸ್ಟರ್ ಕ್ರೀಡಾಕೂಟ: ಬಾಲಕ ಮತ್ತು ಬಾಲಕಿಯರ ಸಮಗ್ರ ತಂಡ ಪ್ರಶಸ್ತಿ

by Kundapur Xpress
Spread the love

ಕೋಟೇಶ್ವರ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಳಾವರ ಇಲ್ಲಿ ನಡೆದ ಕೋಟೇಶ್ವರ ಕ್ಲಸ್ಟರ್ ಮಟ್ಟದ 14ರ ವಯೋಮಾನದ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಸುಶಾಂತ್ ಚಕ್ರ ಎಸೆತದಲ್ಲಿ ಪ್ರಥಮ ಗುಂಡಸೆತದಲ್ಲಿ ಪ್ರಥಮ 80 ಮೀ ಹರ್ಡಲ್ಸ್ ನಲ್ಲಿ ದ್ವಿತೀಯ ಪ್ರಣಮ್ ಎತ್ತರ ಜಿಗಿತ ಪ್ರಥಮ ಚಕ್ರ ಎಸೆತ ದ್ವಿತೀಯ ಗುಂಡೆಸೆತ ತೃತೀಯ ಆದಿತ್ಯ ದೇವಾಡಿಗ 80 ಮೀ ಹರ್ಡಲ್ಸ್ ಪ್ರಥಮ 100 ಮೀ ದ್ವಿತೀಯ ಆದರ್ಶ ವಿ 200 ಮೀ ಪ್ರಥಮ ಉದ್ದ ಜಿಗಿತ ಪ್ರಥಮ ಆದರ್ಶ ಎಂ ಎತ್ತರ ಜಿಗಿತ ತೃತೀಯ ಹಾಗೆ ಬಾಲಕಿಯರ ವಿಭಾಗದಲ್ಲಿ ಸಮೃದ್ಧಿ 80 ಮೀ ಹರ್ಡಲ್ಸ್ ಪ್ರಥಮ ಗುಂಡೆಸೆತ ಪ್ರಥಮ ಚಕ್ರ ಎಸೆತ ತೃತೀಯ ಸಮೀಕ್ಷಾ ಚಕ್ರ ಎಸೆತ ಪ್ರಥಮ ಬ್ರಾಹ್ಮಿ 200 ಮೀ ಪ್ರಥಮ 400ಮೀ ತೃತೀಯ ಸುಧೀಕ್ಷಾ 400 ಮೀ ದ್ವಿತೀಯ ಗಾಯನ ಎತ್ತರ ಜಿಗಿತ ಪ್ರಥಮ ಉದ್ದ ಜಿಗಿತ ದ್ವಿತೀಯ 200 ಮೀ ತೃತೀಯ ಹಾಗೆ ಬಾಲಕ ಹಾಗೂ ಬಾಲಕಿಯರ ಎರಡು ವಿಭಾಗದ 4*100 ಮೀ ರಿಲೇ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಒಟ್ಟು18 ಚಿನ್ನ 5 ಬೆಳ್ಳಿ 5 ಕಂಚಿನ ಪದಕದ ಪಡೆಯುವ ಮೂಲಕ ಬಾಲಕರ ವಿಭಾಗದಲ್ಲಿ ಸುಶಾಂತ್ ಚಾಂಪಿಯನ್ ಪ್ರಶಸ್ತಿ ಯೊಂದಿಗೆ ಬಾಲಕ ಹಾಗೂ ಬಾಲಕಿಯರ ಎರಡು ವಿಭಾಗಗಳಲ್ಲಿ ಸಮಗ್ರ ತಂಡ ಪ್ರಶಸ್ತಿ ಭಾಜನರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ಹೊಳ್ಳ ಮತ್ತು ಉದಯ ಮಡಿವಾಳ ಎಂ ಅಭಿನಂದಿಸಿದ್ದಾರೆ.

 

Related Articles

error: Content is protected !!