Home » ಪೋಕ್ಸೋ ಕಾಯಿದೆ ಮಾಹಿತಿ ಕಾರ್ಯಗಾರ
 

ಪೋಕ್ಸೋ ಕಾಯಿದೆ ಮಾಹಿತಿ ಕಾರ್ಯಗಾರ

by Kundapur Xpress
Spread the love

ಕೋಟೇಶ್ವರ : ಪೋಕ್ಸೋ ಕಾಯ್ದೆ ಕೇವಲ ಕಾನೂನು ಅಲ್ಲ, ಅದು ಮಕ್ಕಳಿಗೆ ಭದ್ರತೆಯ ಕವಚ.
ಈ ಅರಿವನ್ನು ನಮ್ಮ ಕುಟುಂಬ, ಶಾಲೆ ಹಾಗೂ ಸಮಾಜದ ಎಲ್ಲ ಮಕ್ಕಳಿಗೂ ತಲುಪಿಸುವುದೇ ನಮ್ಮ ಮುಂದಿನ ಗುರಿಯಾಗಿರಲಿ.
ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗ ಕೋಟೇಶ್ವರ ಇಲ್ಲಿನ ಮಕ್ಕಳ ಹಕ್ಕುಗಳ ಕ್ಲಬ್ ಹಾಗೂ ರಾಷ್ಟ್ರೀಯ ಸ್ವಯಂಸೇವಾ ಶಾಖೆ ಇವರ ಸಂಯುಕ್ತಾಕ್ಷರದಲ್ಲಿ ಪೋಕ್ಸೋ ಕಾಯಿದೆ ರಸ್ತೆ ಸುರಕ್ಷತೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ನಡೆದ ಮಾಹಿತಿ ಕಾರ್ಯಗಾರದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಾದ ನಂಜ ನಾಯಕ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು
ಸಭೆಯಲ್ಲಿ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ಹಾಗೂ ಪದವಿ ಪೂರ್ವ ವಿಭಾಗದ ಹಿರಿಯ ಉಪನ್ಯಾಸಕ ಹರೀಶ್ ನಾಯಕ್ ಉಪಸ್ಥಿತರಿದ್ದು ದೈಹಿಕ ಶಿಕ್ಷಣ ಶಿಕ್ಷಕರಾದ ಉದಯ ಮಡಿವಾಳ ಎಂ ಕಾರ್ಯಕ್ರಮ ನಿರೂಪಿಸಿ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ರಮಾನಂದ ನಾಯಕ್ ವಂದಿಸಿದರು

 

Related Articles

error: Content is protected !!