205
ಕುಂದಾಪುರ : ನಾಸ್ಕಾಮ್ ಭಾರತದಲ್ಲಿನ ತಾಂತ್ರಿಕ ಉದ್ಯಮದ ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಸಂಸ್ಥೆಯಾಗಿದ್ದು ಭಾರತ ಮತ್ತು ವಿದೇಶ ಸೇರಿ 3000ಕ್ಕೂ ಅಧಿಕ ಕಂಪನಿಗಳು ಒಳಗೊಂಡಿದೆ
ನಾಸ್ಕಾಮ್ ಫ್ಯೂಚರ್ಸ್ ಸ್ಕಿಲ್ಸ್ ಕೌಶಲ್ಯಗಳನ್ನು ಬೆಳೆಸುವಲ್ಲಿ ಭಾರತದ ವೇಗ ಹೆಚ್ಚಿಸಲು ಮತ್ತು ಉದಯೋನ್ಮುಖ ಹೊಸ ತಂತ್ರಜ್ಞಾನದಲ್ಲಿ ಪ್ರತಿಭಗಳಿಗೆ ಜಾಗತಿಕ ಕೇಂದ್ರವಾಗಲು ಉದ್ಯಮ ಚಾಲಿತ ಪರಿಸರ ಕಲಿಕಾ ವ್ಯವಸ್ಥೆ ಹೊಂದಿದ್ದು ಈ ಸಂಸ್ಥೆಯೊಂದಿಗೆ ಎಂಐಟಿ ಕುಂದಾಪುರ ಒಡಂಬಡಿಕೆ ಮಾಡಿಕೊಂಡಿರುವುದು ವಿದ್ಯಾರ್ಥಿಗಳಿಗೆ ಅಭಿವೃದ್ದಿ ಹೊಂದಲು ಒಂದು ಸದಾವಕಾಶವಾಗಿದೆ. ಹಲವಾರು ಉದ್ಯೋಗಗಳಿಗೆ ಹಲವು ತಂತ್ರಜ್ಞಾನ ಕೌಶಲ್ಯಗಳಿಂದ ವಿದ್ಯಾರ್ಥಿಗಳನ್ನು ಭವಿಷ್ಯದ ತಾಂತ್ರಿಕತೆಗೆ ತಯಾರು ಮಾಡುವಲ್ಲಿ ಈ ಒಡಂಬಡಿಕೆ ಮುಖ್ಯ ಪಾತ್ರ ವಹಿಸಿದೆ

