ಕುಂದಾಪುರ :ಕುಂದಾಪುರದ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿಯಾದ ಡಾ. ನಾಗಭೂಷಣರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ವಿದ್ಯಾರ್ಥಿಗಳು ಹೂವಿನ ಮೊಗ್ಗಿನ ತರಹ. ಮೊಗ್ಗು ಅರಳಿ ಹೂವಾಗುವ ಹಾಗೆ ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದೇ ಇರುತ್ತದೆ ವಿದ್ಯಾರ್ಥಿಗಳು ತಮ್ಮಲ್ಲಿ ಸೂಪ್ತವಾಗಿರುವ ಪ್ರತಿಭೆಯನ್ನು ಕಾಲೇಜು ವಾರ್ಷೀಕೋತ್ಸವದ ಮೂಲಕ ಹೊರತರಬೇಕು” ಎಂದು ಡಾ. ನಾಗಭೂಷಣ ಉಡುಪರವರು ಹೇಳಿದರು.ಪ್ರಾಂಶುಪಾಲರಾದ ಪ್ರೊ| ಜೆನ್ನಿಫರ್ ಫ್ರೀಡಾ ಮೆನೇಜಸ್ ರವರು ಶೈಕ್ಷಣಿಕ ವರದಿಯನ್ನು ಮಂಡಿಸಿದರು.ವೇದಿಕೆಯಲ್ಲಿ ಸಹ ಪ್ರಾಧ್ಯಾಪಕಿ ವೆಲ್ಮೇರಾ ಅವಿಟಾ ಡಯಾಸ್, ಉಪನ್ಯಾಸಕಿ ಅಕ್ಷತಾ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವೆಲ್ಮೇರಾ ರವರು ಸ್ವಾಗತಿಸಿದರು. ಉಪನ್ಯಾಸಕಿ ರಕ್ಷಿತಾರವರು ವಿಜೇತರ ಪಟ್ಟಿಯನ್ನು ವಾಚಿಸಿದರು. ಉಪನ್ಯಾಸಕಿ ಶ್ರೀಮತಿ ದಿವ್ಯಾ ಮರಿಯಾ ದಾಂತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ಕೀರ್ತನಾ ರವರು ವಂದಿಸಿದರು. ವಿದ್ಯಾರ್ಥಿಗಳು ಅತ್ಯುತ್ತಮ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದರು. ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

