ಮೂಡ್ಲಕಟ್ಟೆ : ಅಲ್ಲೈಡ್ ಹೆಲ್ತ್ ಸೈನ್ಸಸ್, ಫಿಸಿಯೋಥೆರಪಿ ಹಾಗೂ ಪ್ಯಾರಮೆಡಿಕಲ್ ಸೈನ್ಸಸ್ ಕಾಲೇಜುಗಳು ಸಂಯುಕ್ತವಾಗಿ ಕ್ರೀಡಾಕೂಟ ನಡೆಸಿದ್ದರು. ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಕರಾಟೆ ಕ್ರೀಡಾಪಟು ಹಾಗೂ ಆರ್ ಎಸ್ ಎಂ ಸಂಸ್ಥೆಯ ಹಿರಿಯ ಟಾಲೆಂಟ್ ಅಕ್ವಿಜಿಷನ್ ಏಚ್ ಆರ್ ಆಗಿರುವ ಪ್ರಣವ್ ಎಲ್ ಆಚಾರ್ ಆಗಮಿಸಿ, ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಭಾಷಣ ಮಾಡಿದರು. ಇಂದಿನ ಮೊಬೈಲ್ ಯುಗದಲ್ಲಿ ದೈಹಿಕ ಚಟುವಟಿಕೆಯ ತುಂಬಾ ಅವಶ್ಯ, ಶಾಲೆಗಳಲ್ಲಿ ಕ್ರೀಡಾ ಸಮಯವನ್ನು ಕ್ರೀಡೆಗೆ ಮೀಸಲಿಡಬೇಕಾಗಿ ವಿನಂತಿಸಿದರು. ಯಶಸ್ಸು ಮತ್ತು ಸಾಧನೆ ಪಥದ ಕುರಿತು ವಿಷಯ ಹಂಚಿಕೊಂಡ ಅವರು, ಶಿಸ್ತು, ಪರಿಶ್ರಮ ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮೂಲವೆಂದು ತಿಳಿಸಿದರು.
ಕಾಲೇಜ್ನ ಡೀನ್‌ರಾದ ಡಾ. ಪ್ರೊ. ಪದ್ಮಚರಣ ಸ್ವೈನ್ ಅವರು ಕ್ರೀಡೆಯ ಮಹತ್ವವನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಐ ಎಂ ಜೆ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ ಅವರು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ. ಹೇಮಲತಾ, ಉಪ ಪ್ರಾಂಶುಪಾಲರಾದ ಶ್ರೀಮತಿ ಸೌಜನ್ಯ, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಪ್ರವೀಣ ಖಾರ್ವಿ ಹಾಗೂ ಕಾರ್ಯಕ್ರಮ ಸಂಯೋಜಕರಾದ ಸುಶ್ಮಾ ಉಪಾಧ್ಯ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ವಿದ್ಯಾರ್ಥಿನಿ ತಸ್ಫಿಯಾ ಸಮರ್ಥವಾಗಿ ನಿರ್ವಹಿಸಿದರು. ಸ್ವಾಗತ ಭಾಷಣವನ್ನು ಸಿಂಧು ಅವರು ನೆರವೇರಿಸಿದರೆ, ವಂದನಾರ್ಪಣೆಯನ್ನು ನಂದಿನಿ ಅವರು ಸಲ್ಲಿಸಿದರು.
ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆಯಿಂದ ಕ್ರೀಡಾ ದಿನಾಚರಣೆ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮವು ಶಿಸ್ತು, ಐಕ್ಯತೆ ಮತ್ತು ಕ್ರೀಡಾಸ್ಪೂರ್ತಿಯನ್ನು ಪ್ರತಿಬಿಂಬಿಸಿತು.

