Home » ಮತ್ತೇ ಬಾಲಕಿಯರೇ ಟಾಪರ್ಸ್ ಗುರು
 

ಮತ್ತೇ ಬಾಲಕಿಯರೇ ಟಾಪರ್ಸ್ ಗುರು

ಅಮೂಲ್ಯ ಕಾಮತ್‌ ರಾಜ್ಯಕ್ಕೆ ಪ್ರಥಮ

by Kundapur Xpress
Spread the love

ಬೆಂಗಳೂರು : ಇದೇ ಮೊದಲ ಬಾರಿಗೆ ವೆಬ್‌ ಕಾಸ್ಟಿಂಗ್‌ ಕಣ್ಗಾವಲಲ್ಲಿ ನಡೆದಿದ್ದ2024-25ನೇಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ ಪರೀಕ್ಷೆ ಬರೆದಿದ್ದ 6,88,678  ವಿದ್ಯಾರ್ಥಿಗಳಲ್ಲಿ 4,76,256 ಮಂದಿ ಉತ್ತೀರ್ಣರಾಗಿದ್ದಾರೆ. ತನ್ಮೂಲಕ ಈ ಬಾರಿ ಶೇ.69.16 ರಷ್ಟು ಫಲಿತಾಂಶ ದಾಖಲಾಗಿದ್ದು, ಕಳೆದ ಬಾರಿಗಿಂತ ಶೇ.11.99 ರಷ್ಟು ಫಲಿತಾಂಶ ಕುಸಿದಿದೆ ಒಟ್ಟಾರೆ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸುವ ಜೊತೆಗೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮೂರೂ ಭಾಗಗಳಲ್ಲೂ ಟಾಪರ್‌ಗಳಾಗಿದ್ದಾರೆ.

ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಾರಿಗೊಳಿಸಿದ್ದ ವೆಬ್‌ ಕಾಸ್ಟಿಂಗ್ ವ್ಯವಸ್ಥೆಯನ್ನು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗೂ ಅನುಷ್ಠಾನಗೊಳಿಸಲಾಗಿತ್ತು. ಎಸ್ಸೆಸ್ಸೆಲ್ಸಿ ಮಾದರಿಯಲ್ಲೇ ಪಿಯು ಪರೀಕ್ಷೆಯಲ್ಲೂ ಅಕ್ರಮಗಳಿಗೆ ಕಡಿವಾಣ ಬಿದ್ದ ಪರಿಣಾಮ ಫಲಿತಾಂಶ ಕುಸಿದಿದೆ ಎಂದು  ವಿಶ್ಲೇಷಿಸಲಾಗುತ್ತಿದೆ. 

 

Related Articles

error: Content is protected !!