59
ಕುಂದಾಪುರ: ವಿದ್ಯಾ ಭಾರತಿ ಕರ್ನಾಟಕ ಪ್ರಾಂತ ಇದರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಶ್ರೀಪತಿ ಮೈಸೂರು ಇವರು ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆಗೆ ಭೇಟಿ ನೀಡಿದರು.ಸಂಸ್ಥೆಯ ವಿದ್ಯಾರ್ಥಿ ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಿದರು.ವಿದ್ಯಾರ್ಥಿ ಗಳಿಗೆ ನಡೆಸಿದ ಬೌದ್ಧಿಕದಲ್ಲಿ ಸೃಜನಾತ್ಮಕವಾಗಿ ಯೋಚಿಸಬೇಕು .ಥಿಂಕ್ ಬಿಯಾಂಡ ದ ಬಾಕ್ಸ್ ಹೇಗೆ ಎನ್ನುವುದರ ಕುರಿತು ಹಲವಾರು ಚಿಂತನಾತ್ಮಕ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿ ಗಳಿಂದ ಉತ್ತರ ಪಡೆದರು. ಅನಂತರ ಸಂಸ್ಥೆಯ ಗುರೂಜಿ ಮಾತಾಜಿಯವರೊಂದಿಗೆ ಕ್ರಿಯಾತ್ಮಕ ಚಿಂತನೆಯೊಂದಿಗೆ ಸೃಜನಶೀಲ ಬೋಧಕರಾಗುವುದು ಹೇಗೆ ಎಂಬುದರ ಕುರಿತು ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವಿದ್ಯಾ ಭಾರತಿ ಕರ್ನಾಟಕ ಕಾರ್ಯದರ್ಶಿಗಳಾದ ಶ್ರೀ ಮಹೇಶ ಹೈಕಾಡಿ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ಹರ್ಷ ಕೋಟೇಶ್ವರ ಮತ್ತು ಸಂಪರ್ಕ ಅಧಿಕಾರಿಗಳಾದ ರಾಮಚಂದ್ರ ಆಚಾರ್ಯ ಹಾಗೂ ಮಾತಾಜಿಯವರು ಉಪಸ್ಥಿತರಿದ್ದರು.

