Home » ಸಾಂಸ್ಕೃತಿಕ ಪರ್ವದ ನಾಂದಿಯ ಜೊತೆ ಜೀವನ ಸಂಸ್ಕಾರಕ್ಕೆ ಮುನ್ನುಡಿಯೇ ಈ ಶಿಲಾನ್ಯಾಸ: ಶ್ರೀಮತಿ ಸುಮನಾ ಲಕ್ಷ್ಮೀ ನಾರಾಯಣ
 

ಸಾಂಸ್ಕೃತಿಕ ಪರ್ವದ ನಾಂದಿಯ ಜೊತೆ ಜೀವನ ಸಂಸ್ಕಾರಕ್ಕೆ ಮುನ್ನುಡಿಯೇ ಈ ಶಿಲಾನ್ಯಾಸ: ಶ್ರೀಮತಿ ಸುಮನಾ ಲಕ್ಷ್ಮೀ ನಾರಾಯಣ

by Kundapur Xpress
Spread the love

ತೆಕ್ಕಟ್ಟೆ :  ಸೇವಾ ಸಂಗಮ ವಿದ್ಯಾಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆಯಲ್ಲಿ ಬಯಲು ರಂಗಮಂಟಪದ ಶಿಲಾನ್ಯಾಸ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಸುರೇಶ್ ಬೆಟ್ಟಿನ್ ಅವರು ಸಂಸ್ಥೆಯ ಬೆಳವಣಿಗೆಗೆ ದಾನಿಗಳು ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಂಗಳೂರಿನ ಸುಲಾಕ್ಸ ಫೌಂಡೇಶನ್ ಟ್ರಸ್ಟಿಯವರಾದ ಶ್ರೀಮತಿ ಸುಮನಾ ಲಕ್ಷ್ಮೀನಾರಾಯಣ ಅವರು ಮಾತನಾಡಿ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಬಯಲು ರಂಗಮಂಟಪ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಜೀವನ ಸಂಸ್ಕಾರಕ್ಕೆ ಮುನ್ನುಡಿಯೇ ಈ ಶಿಲಾನ್ಯಾಸ ಎಂದರು.ಡಿ.ಕೆ. ಗಣೇಶ್ (ಮ್ಯಾನೇಜಿಂಗ್ ಡೈರೆಕ್ಟರ್, ನ್ಯೂ ಫೀಲ್ಡ್ ಎಂಜಿನಿಯರಿಂಗ್, ಬೆಂಗಳೂರು), ಆಡಳಿತ ಮಂಡಳಿಯ ಗೌರವಾಧ್ಯಕ್ಷರಾದ ಶ್ರೀ ಸಂಜೀವ್ ಗುಂಡ್ಮಿ, ಪುರೋಹಿತರಾದ ವಿಧ್ವಾನ್ ಶ್ರೀಪತಿ ಉಪಾಧ್ಯ, ಆಡಳಿತ ಮಂಡಳಿಯ ಸಂಚಾಲಕರಾದ ಕಮಲಾಕ್ಷ ಪೈ, ಮುಖ್ಯೋಪಾಧ್ಯಾಯರಾದ ಹರ್ಷ ಕೋಟೇಶ್ವರ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿಗಳು, ಆಡಳಿತ ಮಂಡಳಿ ಸದಸ್ಯರು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಶ್ರೀಮತಿ ಗಾಯತ್ರಿ ಸ್ವಾಗತಿಸಿ, ಶ್ರೀಮತಿ ಸಂಧ್ಯಾ ಭಟ್ ವಂದಿಸಿದರೆ, ಶ್ರೀಮತಿ ಶಕೀಲಾ ಎಚ್ ಕಾರ್ಯಕ್ರಮವನ್ನು ನಿರೂಪಿಸಿದರು.

 

Related Articles

error: Content is protected !!