Home » ಮುಗ್ಧ ಮನಸ್ಸುಗಳ ಸಂತಸದ ಸಂಭ್ರಮದಲ್ಲಿ ಶ್ರೀ ಕೃಷ್ಣನಿದ್ದಾನೆ
 

ಮುಗ್ಧ ಮನಸ್ಸುಗಳ ಸಂತಸದ ಸಂಭ್ರಮದಲ್ಲಿ ಶ್ರೀ ಕೃಷ್ಣನಿದ್ದಾನೆ

ಸಂತೋಷ್ ಶೆಟ್ಟಿ ಮಲ್ಯಾಡಿ

by Kundapur Xpress
Spread the love

ತೆಕ್ಕಟ್ಟೆ : ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾ ಗಿರಿ, ತೆಕ್ಕಟ್ಟೆ ಮತ್ತು ಸೇವಾ ಸಂಗಮ ಮಾದರಿ ಶಿಶು ಮಂದಿರ ತೆಕ್ಕಟ್ಟೆ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ತೆಕ್ಕಟ್ಟೆ ರೋಟರಿ ಕ್ಲಬ್ ನ ಅಧ್ಯಕ್ಷರಾದ ಮಲ್ಯಾಡಿ ಸುಧೀರ್ ಶೆಟ್ಟಿ ಆಗಮಿಸಿ, ಮುಗ್ಧ ಮನಸ್ಸುಗಳ ನಡುವಿನ ಸಂತಸದ ಸಂಭ್ರಮದ ಕಲರವದಲ್ಲಿ ಶ್ರೀ ಕೃಷ್ಣನಿದ್ದಾನೆ. ಜಗತ್ತಿಗೆ ಜೀವನ ಪಾಠವನ್ನು ಬೋಧಿಸಿದವರು ಶ್ರೀ ಕೃಷ್ಣ ಪರಮಾತ್ಮ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಸೇವಾ ಸಂಗಮದ ಅಧ್ಯಕ್ಷರಾದ ಸುರೇಶ್ ಬೆಟ್ಟಿನ್ ವಹಿಸಿದ್ದರು, ಮಾದರಿ ಶಿಶು ಮಂದಿರ ತೆಕ್ಕಟೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಂತೋಷ್ ನಾಯಕ್ ಮತ್ತು ಸೇವಾ ಸಂಗಮ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯರಾದ ಹರ್ಷ ಕೋಟೇಶ್ವರ, ಆಡಳಿತ ಮಂಡಳಿಯ ಸದಸ್ಯರು ಪದಾಧಿಕಾರಿಗಳು,ಪಾಲಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶೋಭಾ ಯಾತ್ರೆಯಲ್ಲಿ ರಾಧಾಕೃಷ್ಣರು, ಭಜನಾ ಕುಣಿತ ಮತ್ತು ಕೋಲಾಟ ಸಾರ್ವಜನಿಕರನ್ನು ಆಕರ್ಷಿಸಿತು. ಕಾರ್ಯಕ್ರಮಕ್ಕೆ ಮಾದರಿ ಶಿಶು ಮಂದಿರದ ಅಧ್ಯಕ್ಷರಾದ ಸಂತೋಷ್ ನಾಯಕ್ ಸ್ವಾಗತಿಸಿ, ಗಾಯತ್ರಿ ಮಾತಾಜಿ ವಂದಿಸಿದರೆ, ದಿವ್ಯನಾಯಕ್ ಕಾರ್ಯಕ್ರಮ ನಿರೂಪಿಸಿದರು.

 

Related Articles

error: Content is protected !!