Home » ವಿದ್ಯಾ ಅಕಾಡೆಮಿಯ ಹೊಸ ಕಟ್ಟಡಕ್ಕೆ ಶಿಲನ್ಯಾಸ
 

ವಿದ್ಯಾ ಅಕಾಡೆಮಿಯ ಹೊಸ ಕಟ್ಟಡಕ್ಕೆ ಶಿಲನ್ಯಾಸ

by Kundapur Xpress
Spread the love

ಕುಂದಾಪುರ : ಮೂಡ್ಲಕಟ್ಟೆಯ ಎಂಎನ್‌ಬಿಎಸ್ ಟ್ರಸ್ಟ್ ಅಧೀನದ ಪೂರ್ವ ಪ್ರಾಥಮಿಕ ಶಾಲೆಯಾದ ವಿದ್ಯಾ ಅಕಾಡೆಮಿಯ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಕ್ಷಯ ತೃತೀಯಾ ದಿನವಾದ ಬುಧವಾರ ಗುದ್ದಲಿಪೂಜೆ ನೆರವೇರಿಸಲಾಯಿತು.

ಮೂಡ್ಲಕಟ್ಟೆಯ ಎಂಎನ್‌ಬಿಎಸ್ ಟ್ರಸ್ಟ್ ಅಧ್ಯಕ್ಷ ಸಿದ್ದಾರ್ಥ ಜೆ. ಶೆಟ್ಟಿ ಹಾಗೂ ಅನುಷಾ ರೈ ದಂಪತಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಎಂಎನ್‌ಬಿಎಸ್ ಟ್ರಸ್ಟನ ಟ್ರಸ್ಟಿಗಳಾದ ವಿದ್ಯಾ ಜೆ. ಶೆಟ್ಟಿ ರಾಮ್ ರತನ್ ಶೆಟ್ಟಿ ಕುಟುಂಬಸ್ಥರು, ವಿದ್ಯಾ ಅಕಾಡೆಮಿಯ ಶಿಕ್ಷಕ ವೃಂದ, ಸಿಬಂದಿ, ಸಹ ಸಂಸ್ಥೆಗಳಾದ ಎಂಐಟಿ, ಮೂಡ್ಲಕಟ್ಟೆನರ್ಸಿಂಗ್‌ ಕಾಲೇಜು ಹಾಗೂ ಐಎಂಜೆ ಕಾಲೇಜಿನ ಪ್ರಮುಖರು, ಮತ್ತಿತರರು ಉಪಸ್ಥಿತರಿದ್ದರು.

2026 ರಿಂದ ಹೊಸ ಕಟ್ಟಡ

ಕುಂದಾಪುರದಿಂದ 4 ಕಿ.ಮೀ. ದೂರದಲ್ಲಿ ಮೂಡ್ಲಕಟ್ಟೆಯ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿರುವ ಈ ವಿದ್ಯಾ ಅಕಾಡೆಮಿಯಲ್ಲಿ 2-3 ವರ್ಷದವರಿಗೆ ಪ್ಲೇ ಗ್ರೂಪ್ ತರಗತಿ, 3-4 ವರ್ಷದವರಿಗೆ ನರ್ಸರಿ, 4-5 ವರ್ಷದವರಿಗೆ 5-6 ಎಲ್‌ ಕೆಜಿ ಹಾಗೂ ವರ್ಷದವರಿಗೆ ಯುಕೆಜಿ ತರಗತಿಗಳಿವೆ. ಇದರೊಂದಿಗೆ 1 ರಿಂದ 3 ನೇ ತರಗತಿಗೆವರೆಗೂ ಇದೆ. ಈ ಹೊಸ ಶೈಕ್ಷಣಿಕ ಕಟ್ಟಡವು 2026ರ ವೇಳೆಗೆ ಪೂರ್ಣಗೊಳ್ಳಲಿದ್ದು, ವಿಶಾಲವಾದ ಪ್ರದೇಶದಲ್ಲಿ ಸಕಲ ಸೌಕರ್ಯಗಳನ್ನು ಒಳಗೊಂಡ, ಸುಸಜ್ಜಿತವಾದ ವ್ಯವಸ್ಥೆ ಇಲ್ಲಿರಲಿದೆ ಪ್ಲೇ ಗ್ರೂಪ್‌ನಿಂದ 10 ನೇ ತರಗತಿಯವರೆಗೆ ಎಲ್ಲವೂ ಒಂದೇ ಕ್ಯಾಂಪಸ್‌ನಲ್ಲಿ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು ಅನ್ನುವ ಉದ್ದೇಶದಿಂದ ಈ ಕಟ್ಟಡ ನಿರ್ಮಿಸಲಾಗುತ್ತಿದೆ.

 

Related Articles

error: Content is protected !!