Home » ಸದ್ವಿಚಾರದ ಮಹತ್ವ
 

ಸದ್ವಿಚಾರದ ಮಹತ್ವ

by Kundapur Xpress
Spread the love
  1. ಸದ್ವಿಚಾರದ ಮಹತ್ವ

ಅಂತಸ್ತು, ಅಧಿಕಾರ, ಸಂಪತ್ತು ಹಾಗೂ ಕೀರ್ತಿಯನ್ನು ಗಳಿಸುವುದೇ ಐಹಿಕ ಬದುಕಿನ ಪ್ರಮುಖ ಉದ್ದೇಶವಾಗಿರುವಲ್ಲಿ ಮನಸ್ಸು ಸಹಜವಾಗಿಯೇ ಸ್ವಾರ್ಥಪರವಾಗಿರುತ್ತದೆ. ಸ್ಪರ್ಧೆಯೇ ಜೀವನದ ಮುಖ್ಯ ಅಂಶವಾಗಿರುವುದರಿಂದ ಅಸೂಯೆ, ಅಸಂತೃಪ್ತಿ, ನಿರಾಶೆಯೇ ಹೆಚ್ಚಾಗಿ ಕಾಡುತ್ತಿರುತ್ತದೆ. ಬದುಕಿನ ಸಾಫಲ್ಯವೆಂದರೆ ಹೆಚ್ಚಿನವರ ದೃಷ್ಟಿಯಲ್ಲಿ ತಮ್ಮ ಸುತ್ತಮುತ್ತಲಿನವರನ್ನು ಹಿಂದಿಕ್ಕುವುದೇ ಆಗಿದೆ. ಹಾಗಾಗಿ ಇತರರ ಪಾಲಿಗೆ ಯಶಸ್ಸು ಲಭಿಸಿದಾಗ ಸಹಜವಾಗಿಯೇ ಮನಸ್ಸಿನಾ ಳದಲ್ಲಿ ಅಸೂಯೆ ಮಡುಗಟ್ಟುತ್ತದೆ. ದ್ವೇಷ ಹೊಗೆಯಾಡ ತೊಡಗುತ್ತದೆ. ಮನಸ್ಸಿನ ಆರೋಗ್ಯ ಹದಗೆಡಲಾರಂಭಿಸುತ್ತದೆ. ಬದುಕು ಸ್ವಾರ್ಥಪರ ಹಾಗೂ ಸ್ಪರ್ಧಾತ್ಮಕವಾದಾಗ ಜೀವನದ ಮೂಲಭೂತ ಉದ್ದೇಶವೇ ಮರೆಯಾಗುತ್ತದೆ. ಬದುಕಿನ ನೈಜ ಆನಂದವಿರುವುದು ಅದರ ವಾಸ್ತವತೆಯನ್ನು ಮತ್ತು ಯಥಾರ್ಥವನ್ನು ಸ್ವೀಕರಿಸುವುದರಲ್ಲಿ. ಸಂತ ಅಸೀಸಿಯವರ ಪ್ರಾರ್ಥನೆಯಲ್ಲಿ ಬರುವ ವಿಚಾರ ಹೀಗಿದೆ: ‘ದೇವರೇ, ನನ್ನ ಸಾಮಥ್ರ್ಯಕ್ಕೆ ಅನುಗುಣವಾಗಿ ಬದುಕಿನಲ್ಲಿ ಏನನ್ನೆಲ್ಲ ಮಾಡಲು ಸಾಧ್ಯವಿದೆಯೋ ಅವನ್ನು ಮಾಡುವ ಶಕ್ತಿಯನ್ನು ನನಗೆ ಕರುಣಿಸು; ನನ್ನಿಂದ ಏನನ್ನು ಮಡಲು ಅಸಾಧ್ಯವೋ ಅದನ್ನು ಒಪ್ಪಿಕೊಳ್ಳುವ ವಿವೇಕವನ್ನು ದಯಪಾಲಿಸು.’ ಸ್ವಾಮಿ ವಿವೇಕಾನಂದರು ಒಂದೆಡೆ ಹೇಳುತ್ತಾರೆ: ‘ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ. ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹಾತ್ಕಾರ್ಯ ಉದ್ಭವಿಸುತ್ತದೆ. ‘ಸದ್ವಿಚಾರಗಳೆಂದರೆ ನಿಸ್ವಾರ್ಥ ವಿಚಾರಗಳೇ ಆಗಿವೆ. ಯಾವ ವಿಚಾರಗಳಲ್ಲಿ ಸ್ವಾರ್ಥಪರತೆ ಇಲ್ಲವೋ ಅವು ಮೈಮನಕ್ಕೆ ಮುದ ನೀಡುವಂತಿರುತ್ತದೆ

   

Related Articles

error: Content is protected !!