Home » ಕಾಶ್ಮೀರ ಗಡಿಗೆ ನುಗ್ಗಲೆತ್ನಿಸಿದ 7 ಪಾಕಿಗಳ ಹತ್ಯೆ
 

ಕಾಶ್ಮೀರ ಗಡಿಗೆ ನುಗ್ಗಲೆತ್ನಿಸಿದ 7 ಪಾಕಿಗಳ ಹತ್ಯೆ

ಮೂವರು ಪಾಕ್ ಸೇನಾ ಸಿಬ್ಬಂದಿ

by Kundapur Xpress
Spread the love

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಮ್ (ಬಿಎಟಿ) 7 ಜನರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಪೈಕಿ ಮೂವರು ಪಾಕ್ ಸೇನೆಯ ಸಿಬ್ಬಂದಿ ಎಂದು ತಿಳಿದು ಬಂದಿದೆ.

ಫೆ.4-5ರ ಮಧ್ಯರಾತ್ರಿ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ಥಾನ ನುಸುಳುಕೋರರು ಹೊಂಚು ಹಾಕಿ ದಾಳಿಗೆ ಯೋಚಿಸಿದ್ದರು. ಈ ದಾಳಿಯನ್ನು ಭಾರತೀಯ ಸೇನೆಯು ವಿಫಲಗೊಳಿಸಿದೆ. ಮೃತ 7 ನುಸುಳುಕೋರರಲ್ಲಿ ಪಾಕಿಸ್ತಾನ ಸೇನೆಯ 2-3 ಸಿಬ್ಬಂದಿ ಸಾವನ್ನಪ್ಪಿದ್ದರೆ,ಉಳಿದವರು ಆಲ್‌ ಖೈದಾ ಸಂಘಟನೆಯ ಸದಸ್ಯರು ಎಂದು ಶಂಕಿಸಲಾಗಿದೆ

 

Related Articles

error: Content is protected !!