Home » ಅಮೇರಿಕದಲ್ಲಿ ಅಕ್ರಮ ವಲಸಿಗರ ಬೇಟೆ ಶುರು
 

ಅಮೇರಿಕದಲ್ಲಿ ಅಕ್ರಮ ವಲಸಿಗರ ಬೇಟೆ ಶುರು

by Kundapur Xpress
Spread the love

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷರಾಗುತ್ತಿದ್ದಂತೆ ದೇಶದ ಗಡಿ ಹಾಗೂ ಜನರನ್ನು ರಕ್ಷಿಸುವ ಆದೇಶಕ್ಕೆ ಸಹಿ ಹಾಕಿದ್ದ ಡೊನಾಲ್ಡ್ ಟ್ರಂಪ್ ಈ ಗಡಿಗಳ ಮೂಲಕ ಒಳನುಸುಳಿದ್ದ ಅಕ್ರಮ ವಲಸಿಗರನ್ನು ದೇಶದಿಂದ ಹೊರ ಹಾಕುವ ಕೆಲಸ ಶುರು ಮಾಡಿದ್ದಾರೆ. ಅವರ ಮೊದಲ 3 ದಿನದ ಅಧಿಕಾರಾವಧಿಯಲ್ಲಿ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 538 ವಲಸಿಗರನ್ನು ಬಂಧಿಸಲಾಗಿದ್ದು ಗಡೀಪಾರು ಮಾಡಲಾಗಿದೆ.

ಕೋಟ್ಯಂತರ ಜನರು ಅಮೆರಿಕಕ್ಕೆ ಒಳನುಸುಳಿದ್ದ ಹಿನ್ನೆಲೆಯಲ್ಲಿ ಅವರನ್ನು ದೇಶದಿಂದ ಹೊರ ಹಾಕುವ ವಿಶ್ವದ ಅತಿದೊಡ್ಡ ಗಡೀಪಾರು ಅಭಿಯಾನ ಆರಂಭಿಸಿರುವುದಾಗಿ ಚುನಾವಣೆ ವೇಳೆ ಟ್ರಂಪ್‌ ಹೇಳಿದ್ದರು. ಅದನ್ನು ಈಗ ಕಾರ್ಯರೂಪಕ್ಕೆ ತರಲು ಆರಂಭಿಸಿದ್ದಾರೆ. ಈಗ ಗಡೀಪಾರಿಗೆ ಒಳಗಾದವರಲ್ಲಿ ಓರ್ವ ಭಯೋತ್ಪಾದಕ ಸೇರಿ ಅತ್ಯಾಚಾರಿಗಳು ಹಾಗೂ ಕ್ರಿಮಿನಲ್‌ಗಳಿದ್ದಾರೆ.

ಈ ಕುರಿತು ಶ್ವೇತಭವನದ ಪತ್ರಿಕಾ ಕಾವ್ಯದರ್ಶಿ ಕ್ಯಾರೊಲಿನ್ ಮಾಹಿತಿ ನೀಡಿದ್ದು ಟ್ರಂಪ್ ಆಡ ಳಿತವು ಶಂಕಿತ ಉಗ್ರರು, ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರು ಸೇರಿದಂತೆ 538 ಅಕ್ರಮ ವಲಸಿಗರನ್ನು ‘ಬಂಧಿಸಿದೆ. ಅಂತೆಯೇ ನೂರಾರು ಜನರನ್ನು ಸೇನಾ ವಿಮಾನದಲ್ಲಿ ಗಡೀಪಾರು ಮಾಡಲು ಆರಂಭಿಸಿದೆ’ ಎಂದಿದ್ದಾರೆ.

ಟ್ರಂಪ್ ಸಹಿ ಮಾಡಿದ್ದ ಆದೇಶದಲ್ಲಿ ‘ಕಳೆದ 4 ವರ್ಷಗಳಲ್ಲಿ ಲಕ್ಷಾಂತರ ವಿದೇಶಿಗರು ಗಡಿ ದಾಟಿ ಅಥವಾ ವಿಮಾನದ ಮೂಲದ ಬಂದು ಅಮೆರಿಕದಲ್ಲಿ ನೆಲೆಸಿದ್ದರು. ಅವರಿಂದ ರಾಷ್ಟ್ರದ ಭದ್ರತೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುತ್ತದೆ’ ಎಂದು ತಿಳಿಸಲಾಗಿತ್ತು.

 

Related Articles

error: Content is protected !!