ಪ್ರಯಾಗರಾಜ್ : ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತಿರುವ ಮಹಾಕುಂಭದಲ್ಲಿ ಇಂದು ಬುಧವಾರ ಮೌನಿ ಅಮಾವಾಸ್ಯೆಯಂದು ಸುಮಾರು 10 ಕೋಟಿ ಭಕ್ತರು ಸೇರುವ ನಿರೀಕ್ಷೆಯಿದೆ. ಉತ್ತರ ಪ್ರದೇಶ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಭದ್ರತೆಯನ್ನು ಕೂಡ ಹೆಚ್ಚಿಸಿದೆ.
ಇನ್ನು ಯಾತ್ರಾರ್ಥಿಗಳಿಗೆ ತೊಂದರೆಯಾಗದಂತೆ ಭಾರತೀಯ ರೈಲ್ವೆ ಮಹಾಕುಂಭದ ಅತ್ಯಂತ ಪವಿತ್ರ ಆಚರಣೆಯಾದ ಅಮೃತ ಸ್ನಾನಕ್ಕೆ ಮುಂಚಿತವಾಗಿ ವಿಸ್ತಾರವಾದ ಯೋಜನೆಯನ್ನು ರೂಪಿಸಿದೆ.
ಮೊದಲೇ ನಿರ್ಧರಿಸಿದ ಸಂಖ್ಯೆಯ ಜತೆಗೆ 60 ವಿಶೇಷ ರೈಲುಗಳು ಬುಧವಾರ ಚಲಿಸಲಿವೆ. 190 ವಿಶೇಷ ರೈಲುಗಳು ಸಂಚರಿಸಲಿವೆ ಆ ಮಾರ್ಗದಲ್ಲಿ 110 ಸಾಮಾನ್ಯ ರೈಲುಗಳು ಎಂದಿನಂತೆ ಚಲಿಸುತ್ತವೆ. ಪ್ರಯಾಗರಾಜ್ನಿಂದ ಪ್ರತಿ 4 ನಿಮಿಷಗಳಿಗೊಮ್ಮೆ ರೈಲು ಲಭ್ಯವಿರುತ್ತದೆ, ಇದು ದೊಡ್ಡ ಸಾಧನೆಯಾಗಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸತೀಶ್ ಕುಮಾರ್ ತಿಳಿಸಿದ್ದಾರೆ.
ವರದಿಯ ಪ್ರಕಾರ, ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದ ‘ಉದ್ದಕ್ಕೂ ಹಲವಾರು ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಮೇಳ ಪ್ರದೇಶದ ಮೇಲೆ ಕಣ್ಣಿಟ್ಟಿರುವ ಎಐ ಚಾಲಿತ ಸಿಸಿ ಟಿವಿ ಕ್ಯಾಮೆರಾಗಳು ಮತ್ತು ಡೋನ್ಗಳನ್ನು ಸ್ಥಾಪಿಸುವುದರೊಂದಿಗೆ ಹೆಚ್ಚನ ಭದ್ರತೆ ಒದಗಿಸಲಾಗಿದೆ