ವಿಯೆಂಟಿಯಾನ್ : ಲಾವೋಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ,ಭಾರತ ಮತ್ತು ಲಾವೋಸ್ ಪರಂಪರೆ ಮತ್ತು ಪ್ರಾಚೀನ ನಾಗರಿಕತೆಯನ್ನು ಬಿಂಬಿಸುವ ‘ಲವೋಷಿಯನ್ ರಾಮಾಯಣ’ ಪ್ರದರ್ಶನವನ್ನು ವೀಕ್ಷಿಸಿದರು.ಲಾವೋಸ್ನಲ್ಲಿ ಪ್ರದರ್ಶನಗೊಂಡ ಈ ರಾಮಾಯಣವು 16 ಶತಮಾನದಲ್ಲಿ ಭಾರತದಿಂದ ಲಾವೋಸ್ಗೆ ಹೋಗಿ ನೆಲೆಸಿದ್ದ ಬೌದ್ಧ ಸನ್ಯಾಸಿಗಳು ರಚಿಸಿಕೊಂಡ ರಾಮಾಯಣ. ಇದು ಮೂಲ ರಾಮಾಯಣವನ್ನೇ ಹೋಲಲಿದ್ದು ಅಲ್ಲಿನ ಪ್ರಾದೇಶಿಕತೆಗೆ ಅನುಗುಣವಾಗಿ ಕೊಂಚ ಮಾರ್ಪಾಡು ಮಾಡಿಕೊಂಡಿದ್ದಾರೆ.ಆಸಿಯಾನ್-ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಲಾವೋಸ್ ಗೆ ತೆರಳಿದ್ದು ಅಲ್ಲಿ ಲುವಾಂಗ್ ಪ್ರಬಾಂಗ್ನ ಥಿಯೇಟರ್ನಲ್ಲಿ ಫಲಕ್ ಫಲಮ್ ಅಥವಾ ಫ್ರಾ ಲಕ್ ಫ್ರಾ ರಾಮ್ ಎಂಬ ಲೊವೇಷಿಯನ್ ರಾಮಾಯಣದ ಸಂಚಿಕೆಯನ್ನು ವೀಕ್ಷಿಸಿದರು.