ಹೊಸದಿಲ್ಲಿ : ಹೆದ್ದಾರಿ ಬಳಕೆದಾರರಿಗೆ ಪ್ರಯೋಜನವಾಗಲೆಂದು ಸಮಾನ ಸುಂಕ ನೀತಿ ರಚನೆಗೆ ರಸ್ತೆ ಸಾರಿಗೆ-ಹೆದ್ದಾರಿ ಖಾತೆ ಮುಂದಾಗಿದೆ. ಇದು ಹೆದ್ದಾರಿ ಬಳಕೆದಾರರ ಸಮಸ್ಯೆಗಳಿಗೆ ಸ್ಪಂದಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಪ್ರಸಕ್ತ ಭಾರತದ ಹೆದ್ದಾರಿ ಮೂಲ ಸೌಕರ್ಯಗಳು ಅಮೆರಿಕದ ಹೆದ್ದಾರಿಗಳನ್ನು ಹೋಲುತ್ತಿವೆ ಎಂದವರು ನುಡಿದರು.
ಜಿಎನ್‌ಎಸ್‌ಎಸ್ ಜಾರಿ : ಅತ್ಯಧಿಕ ಸುಂಕ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಲ್ಲಿ ಹೆಚ್ಚುತ್ತಿರುವ ಅಸಮಾಧಾನ ಸಹಿತ ಬಳಕೆದಾರರ ಇನ್ನಿತರ ಅನುಭವಗಳ ಹಿನ್ನೆಲೆಯಲ್ಲಿ, ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸಚಿವ ಗಡ್ಕರಿ ಈ ತರ ಮಾಹಿತಿ ನೀಡಿದರು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಂಕ ಸಂಗ್ರಹ ವ್ಯವಸ್ಥೆ ಆಧಾರಿತ, ತಡೆ ರಹಿತ ಗ್ಲೋಬಲ್ ನೇವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್ಎಸ್ ಎಸ್) ಅನುಷ್ಟಾನಕ್ಕೆ ಹೆದ್ದಾರಿ ಖಾತೆ ನಿರ್ಧರಿಸಿದೆ ಎಂದರು