Home » ಅಸಾಧಾರಣ ನಾಯಕ ಕೃಷ್ಣ : ಪ್ರಧಾನಿ ಮೋದಿ ಶೋಕ
 

ಅಸಾಧಾರಣ ನಾಯಕ ಕೃಷ್ಣ : ಪ್ರಧಾನಿ ಮೋದಿ ಶೋಕ

by Kundapur Xpress
Spread the love

ನವದೆಹಲಿ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಭಾವುಕ ಪೋಸ್ಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದು ‘ಕೃಷ್ಣ ಅವರೊಬ್ಬ ಅಸಾಧಾರಣ ನಾಯಕ’ ಎಂದು ಸ್ಮರಿಸಿದ್ದಾರೆ.

ಕನ್ನಡದಲ್ಲಿಯೇ ಟ್ವಿಟ್ ಮಾಡಿರುವ ಮೋದಿ, ‘ಶ್ರೀ ಎಸ್. ಎಂ ಕೃಷ್ಣ ಅವರು ಅಸಾಧಾರಣ ನಾಯಕರಾಗಿದ್ದರು, ಸಮಾಜದ ಎಲ್ಲ ವರ್ಗಗಳ ಜನರ ಮೆಚ್ಚುಗೆಗೆ ಪಾತ್ರರಾ ಗಿದ್ದರು. ಅವರು ಯಾವಾಗಲೂ ಇತರರ ಜೀವನವನ್ನು ಸುಧಾರಿಸಲು ದಣಿವರಿಯದೆ ಶ್ರಮಿಸಿದರು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಗಮನಹರಿಸಿದ್ದನ್ನು ಸ್ಮರಿಸಿಕೊಳ್ಳಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ಅಂತೆಯೇ, ಕೃಷ್ಣ ಜತೆ ತಮ್ಮ ಒಡನಾಟವನ್ನು ಸ್ಮರಿಸುತ್ತಾ, ‘ಕಳೆದ ಹಲವು ವರ್ಷಗಳಿಂದ ಕೃಷ್ಣ ಜತೆ ಸಂವಾದ ನಡೆಸುವ ಅನೇಕ ಅವಕಾಶಗಳು ದೊರೆತವು ಮತ್ತು ಆ ಸಂವಾದಗಳನ್ನು ನಾನು ಯಾವಾಗಲೂ ಗೌರವಿಸುತ್ತೇನೆ ಎಂದಿದ್ದಾರೆ.

 

Related Articles

error: Content is protected !!